Sunday, August 30, 2026
Homeತಾಜಾ ಸುದ್ದಿಬೆಂಗಳೂರು: ನಟ ದಿಗಂತ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ, ನಾಳೆ ಡಿಸ್ಚಾರ್ಜ್ ಸಾಧ್ಯತೆ

ಬೆಂಗಳೂರು: ನಟ ದಿಗಂತ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ, ನಾಳೆ ಡಿಸ್ಚಾರ್ಜ್ ಸಾಧ್ಯತೆ

- Advertisement -
- Advertisement -

ಬೆಂಗಳೂರು:  ಕುತ್ತಿಗೆಗೆ ಗಾಯವಾಗಿದ್ದ ನಟ ದಿಗಂತ್ ಅವರಿಗೆ  ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆಪರೇಷನ್ ಯಶಸ್ವಿಯಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ದಿಗಂತ್ ಅವರಿಗೆ ಸರ್ಜರಿ ಮುಗಿದಿದೆ. ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಅವರು ತಾವು ಚೇತರಿಸಕೊಳ್ಳುತ್ತಿರುವುದಾಗಿ ಥಂಬ್ಸ್ ಅಪ್ ಮಾಡಿದ್ದಾರೆ. ಇಂದು ಮಧ್ಯಾಹ್ನದ ವೇಳೆ ನಟಿ ಐಂದ್ರಿತಾ ರೇ ಹಾಗೂ ಅಸ್ಪತ್ರೆ ವೈದ್ಯರು ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಜೊತೆಗೆ ಗೋವಾಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದರು. ಈ ವೇಳೆಯಲ್ಲಿ ಸಮುದ್ರದ ತಟದಲ್ಲಿ ಪಲ್ಟಿ ಹೊಡೆಯುವಂತ ವೇಳೆಯಲ್ಲಿ ಆಯತಪ್ಪಿ ಬಿದ್ದು, ಕುತ್ತಿಗೆಗೆ ಗಾಯವಾಗಿತ್ತು.

- Advertisement -

Latest News

error: Content is protected !!