Thursday, June 4, 2026
Homeಕರಾವಳಿಉಡುಪಿಬಂಟ್ವಾಳ; ಫರಂಗಿಪೇಟೆಯಿಂದ ನಾಪತ್ತೆಯಾಗಿದ್ದ ದಿಗಂತ್ ಪತ್ತೆ

ಬಂಟ್ವಾಳ; ಫರಂಗಿಪೇಟೆಯಿಂದ ನಾಪತ್ತೆಯಾಗಿದ್ದ ದಿಗಂತ್ ಪತ್ತೆ

- Advertisement -
- Advertisement -

ಬಂಟ್ವಾಳ : ನಿಗೂಢವಾಗಿ ನಾಪತ್ತೆಯಾಗಿದ್ದ ಪಿಯು ವಿದ್ಯಾರ್ಥಿ ದಿಗಂತ್ 12 ದಿನಗಳ ಬಳಿಕ ಉಡುಪಿಯ ಡಿ ಮಾರ್ಟ್ ಮಾಲ್ ನಲ್ಲಿ ಮಾ.8 ರಂದು ಸುಮಾರು 4 ಗಂಟೆಗೆ ಪತ್ತೆಯಾಗಿದ್ದಾನೆ.

ಫೆ.25 ರಂದು ಫರಂಗಿಪೇಟೆ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದ ದಿಗಂತ್ ನಾಪತ್ತೆಯಾಗಿದ್ದ‌‌. ಇದೀಗ 12 ದಿನಗಳ ಬಳಿಕ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಡಿ ಮಾರ್ಟ್ ಮಾಲ್ ನಲ್ಲಿ ಸುತ್ತಾಡುತ್ತಿದ್ದ ಬಗ್ಗೆ ಮಾಹಿತಿ ಹಿಂದೂ ಸಂಘಟನೆ ಯುವಕರಿಗೆ ತಿಳಿದು ಮಾಲ್ ಗೆ ಹೋಗಿ ಬಾಲಕನನ್ನು ವಿಚಾರಿಸಿದಾಗ ನಾಪತ್ತೆಯಾದ ದಿಗಂತ್ ಎಂದು ತಿಳಿದು ಬಂದಿದೆ.

ದಿಗಂತ್ ನನ್ನು ಉಡುಪಿ ನಗರ ಪೊಲೀಸರಿಗೆ ಹಸ್ತಾಂತರ ಮಾಡಿ ನಂತರ ಮನೆಯವರಿಗೆ ಕರೆ ಮಾಡಿ ಮಾತಾನಾಡಿಸಿದ್ದಾರೆ. ಅದರಂತೆ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಬಂಟ್ವಾಳ ವಿಶೇಷ ಕರ್ತವ್ಯದಲ್ಲಿದ್ದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಮತ್ತು ತಂಡ ಉಡುಪಿ ನಗರ ಪೊಲೀಸ್ ಠಾಣೆಗೆ ಹೋಗಿ ದಿಗಂತ್‌ ನನ್ನು ತಮ್ಮ ಸುಪರ್ದಿಗೆ ಪಡೆದು ನಾಪತ್ತೆಗೆ ಕಾರಣ ತಿಳಿದುಕೊಳ್ಳಲು ಹಾಗೂ ನಾಪತ್ತೆ ಪ್ರಕರಣ ದಾಖಲಾದ ಪ್ರಕರಣವನ್ನು ಸುಖಾಂತ್ಯಗೊಳಿಸಲು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವಾಹನದಲ್ಲಿ ಕರೆತರುತ್ತಿದ್ದಾರೆ.

- Advertisement -

Latest News

error: Content is protected !!