Thursday, July 16, 2026
Homeತಾಜಾ ಸುದ್ದಿಶಾಲೆ ಮುಂದೆ ಮಕ್ಕಳಿಗೆ ಸ್ಟಾಪ್ ಕೊಡದ ಖಾಸಗಿ ಬಸ್; ಚಲಿಸುವ ಬಸ್ಸಿಗೆ ಅಡ್ಡ ನಿಂತು ಪ್ರತಿಭಟಿಸಿದ...

ಶಾಲೆ ಮುಂದೆ ಮಕ್ಕಳಿಗೆ ಸ್ಟಾಪ್ ಕೊಡದ ಖಾಸಗಿ ಬಸ್; ಚಲಿಸುವ ಬಸ್ಸಿಗೆ ಅಡ್ಡ ನಿಂತು ಪ್ರತಿಭಟಿಸಿದ ಮುಖ್ಯ ಶಿಕ್ಷಕ

- Advertisement -
- Advertisement -

ಕೇರಳ; ಶಾಲೆಯ ಬಳಿಯಿರುವ ಬಸ್ ನಿಲ್ದಾಣದಲ್ಲಿ ಮಕ್ಕಳಿಗೆ ಸ್ಟಾಪ್ ನೀಡಲ್ಲ ಅನ್ನೋ ಕಾರಣಕ್ಕೆ ಶಾಲಾ ಮುಖ್ಯ ಶಿಕ್ಷಕರೊಬ್ಬರು  ಸ್ವತಃ ಹೆದ್ದಾರಿಗೆ ಬಂದು ಬಸ್ಸನ್ನು ತಡೆದು ನಿಧಾನವಾಗಿ ಚಲಿಸುವಂತೆ ಮತ್ತು ಶಾಲಾ ಬಸ್​ ನಿಲ್ದಾಣದ ಬಳಿ ನಿಲುಗಡೆಗೆ ಒತ್ತಾಯಿಸಿರುವ ಅಪರೂಪದ ಘಟನೆ ಕೇರಳದ ಕೆಳಕೋಡ್‌ನ ಪಿಟಿಎಂಎಚ್‌ಎಚ್ ಶಾಲೆಯ ಬಳಿ ನಡೆದಿದೆ.

ಶಾಲಾ ಮುಖ್ಯೋಪಾಧ್ಯಾಯ ಸೈನುದ್ದೀನ್ ಸಕೀರ್ ಅವರು ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ನಡುವೆ ಸಂಚರಿಸುವ ರಾಜಪ್ರಭ ಎಂಬ ಖಾಸಗಿ ಬಸ್ಸನ್ನು ತಡೆದು, ಶಾಲೆಯ ಬಳಿ ನಿಲುಗಡೆ ಮಾಡುವಂತೆ ಪ್ರತಿಭಟಿಸಿದ್ದಾರೆ.

ಮುಖ್ಯೋಪಾಧ್ಯಾಯರು ಪ್ರತಿಭಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ವೈರಲ್ ವಿಡಿಯೋದಲ್ಲಿ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಬಸ್ ನಿಲ್ಲಿಸಿ ಎಂದು ಆಗ್ರಹಿಸುವುದು ಕಂಡು ಬಂದಿದೆ.ಬಸ್ ಸಿಬ್ಬಂದಿ ನಿರ್ಲಕ್ಷ್ಯವನ್ನು ಅವರು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!