Friday, May 17, 2024
Homeಕರಾವಳಿದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಮಾಡೋದಕ್ಕೆ ವಿರೋಧ: ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ದೇವಾಲಯದ...

ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಮಾಡೋದಕ್ಕೆ ವಿರೋಧ: ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ದೇವಾಲಯದ ವಿರುದ್ಧ ದೂರು

spot_img
- Advertisement -
- Advertisement -

ಮಂಗಳೂರು : ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡುವುದುಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದ್ದು, ಫಲಕ ತೆರವಿಗೆ ಮನವಿ ಮಾಡಲಾಗಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವಿರುದ್ಧ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಿದೆ.

ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ದತಿ ಇಲ್ಲ, ದಿವ್ಯಾಂಗರು ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಚರ್ಮರೋಗವಿದ್ದವರು ಅಂಗಿ ಕಳಚಿದರೆ ಚರ್ಮರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ. ಇದು ಸಂವಿಧಾನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕೂಡಲೇ ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡಬೇಕು ಎಂಬ ಸೂಚನಾ ಫಲಕ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

- Advertisement -
spot_img

Latest News

error: Content is protected !!