Saturday, April 20, 2024
Homeಕ್ರೀಡೆಐಪಿಎಲ್ ಗೂ ಗುಡ್ ಬೈ ಹೇಳ್ತಾರಾ ಕೂಲ್ ಕ್ಯಾಪ್ಟನ್ ಧೋನಿ?

ಐಪಿಎಲ್ ಗೂ ಗುಡ್ ಬೈ ಹೇಳ್ತಾರಾ ಕೂಲ್ ಕ್ಯಾಪ್ಟನ್ ಧೋನಿ?

spot_img
- Advertisement -
- Advertisement -

ನವದೆಹಲಿ:  ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ದಯನೀಯ ನಿರ್ವಹಣೆಯೊಂದಿಗೆ ಲೀಗ್ ಹಂತದಲ್ಲೇ ನಿರ್ಗಮನ ಕಂಡಿದೆ. ಇದರ ಬೆನ್ನಲ್ಲೇ 39 ವರ್ಷದ ಧೋನಿ ಐಪಿಎಲ್‌ನಿಂದಲೂ ನಿವೃತ್ತಿ ಹೊಂದಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಧೋನಿ ಕಳೆದ ಕೆಲ ಪಂದ್ಯಗಳ ಬಳಿಕ ತನ್ನ ಜೆರ್ಸಿಯನ್ನು ಎದುರಾಳಿ ಆಟಗಾರರಿಗೆ ಉಡುಗೊರೆಯಾಗಿ ನೀಡುತ್ತಿರುವುದು ಇದಕ್ಕೆ ಪುಷ್ಠಿ ಎಂದೂ ವಿಶ್ಲೇಷಿಸಲಾಗುತ್ತಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಐಪಿಎಲ್‌ನಲ್ಲಿ 200ನೇ ಪಂದ್ಯವಾಡಿದ ತನ್ನ ಜೆರ್ಸಿಯನ್ನು ಪಂದ್ಯಶ್ರೇಷ್ಠ ಜೋಸ್ ಬಟ್ಲರ್‌ಗೆ ಉಡುಗೊರೆ ನೀಡಿದ್ದ ಧೋನಿ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕವೂ ತನ್ನ ಜೆರ್ಸಿಯನ್ನು ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ ನೀಡಿದ್ದರು. ಹೀಗಾಗಿ ಇದು ಧೋನಿಗೆ ಐಪಿಎಲ್‌ನಲ್ಲಿ ಕೊನೆಯ ವರ್ಷವಾಗಿರಬಹುದು ಎಂದು ಅವರ ಅಭಿಮಾನಿಗಳು ವ್ಯಾಖ್ಯಾನಿಸುತ್ತಿದ್ದಾರೆ.

ಈ ನಡುವೆ ಧೋನಿ ಟೂರ್ನಿಯ ಉಳಿದ 3 ಪಂದ್ಯಗಳಲ್ಲೂ ಸಿಎಸ್‌ಕೆ ಪರ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ನಾಯಕ ಖಂಡಿತವಾಗಿಯೂ ಹಿಂದೆ ಸರಿಯಲು ಆಗಲು ಎಂದು ಧೋನಿ ಮುಂಬೈ ವಿರುದ್ಧದ ಪಂದ್ಯದ ಬಳಿಕ ಹೇಳಿದ್ದರು. ಧೋನಿ ಹಾಲಿ ಆವೃತ್ತಿಯಲ್ಲಿ ಬ್ಯಾಟ್ಸ್‌ಮನ್ ಆಗಿಯೂ ವೈಫಲ್ಯ ಕಂಡಿದ್ದು, ಆಡಿದ 11 ಪಂದ್ಯಗಳಲ್ಲಿ 180 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಈ ಪೈಕಿ ಅಜೇಯ 47 ರನ್ ಅವರ ಗರಿಷ್ಠ ಗಳಿಕೆಯಾಗಿದೆ.

ಇನ್ನು ಧೋನಿ ಐಪಿಎಲ್‌ನಿಂದ ಆಟಗಾರ, ನಾಯಕನಾಗಿ ನಿವೃತ್ತಿ ಹೊಂದಿದ್ದರೂ, ಸಿಎಸ್‌ಕೆ ತಂಡದ ಭಾಗವಾಗಿ ಮುಂದುವರಿಯುವ ನಿರೀಕ್ಷೆ ಇದೆ. ಸಿಎಸ್‌ಕೆ ಫ್ರಾಂಚೈಸಿ ಜತೆ ಆಪ್ತ ಸಂಬಂಧ ಹೊಂದಿರುವ ಧೋನಿ, ತಂಡದ ಕೋಚ್, ಮೆಂಟರ್ ಅಥವಾ ಐಕಾನ್ ಆಗಿ ಮುಂದುವರಿಯುವುದು ನಿಶ್ಚಿತವೆನಿಸಿದೆ.

ಧೋನಿ 2008ರ ಚೊಚ್ಚಲ ಆವೃತ್ತಿಯಿಂದಲೂ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ತಂಡವನ್ನು ಪ್ಲೇಆಫ್​ ಅಥವಾ ಸೆಮಿಫೈನಲ್ ಹಂತಕ್ಕೇರಿಸಲು ವಿಫಲರಾಗಿದ್ದಾರೆ. ಈ ನಡುವೆ 3 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿರುವ ಧೋನಿ, 7 ಬಾರಿ ಫೈನಲ್‌ಗೇರಿಸಿದ್ದಾರೆ. 2016-17ರ ಟೂರ್ನಿಯಲ್ಲಿ ಸಿಎಸ್‌ಕೆ ತಂಡ ನಿಷೇಧದಿಂದಾಗಿ ಆಡಿರಲಿಲ್ಲ.

- Advertisement -
spot_img

Latest News

error: Content is protected !!