Wednesday, June 24, 2026
Homeತಾಜಾ ಸುದ್ದಿಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಖ್ಯಾತ ನಟಿ..

ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಖ್ಯಾತ ನಟಿ..

- Advertisement -
- Advertisement -

ಬೆಂಗಳೂರು: ಕಿರುತೆರೆ ಧಾರಾವಾಹಿ ‘ಅವನು ಮತ್ತೆ ಶ್ರಾವಣಿ’ ಧಾರವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಚೈತ್ರಾ ರೆಡ್ಡಿ ತಮ್ಮ ಬಹುಕಾಲದ ಸ್ನೇಹಿತ ರಾಕೇಶ್ ಸುಮಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿವೆ.

ನಟ ವಿನೋದ್ ಪ್ರಭಾಕರ್ ನಟನೆಯ ‘ರಗಡ್’ ಸಿನಿಮಾದಲ್ಲಿ ಚೈತ್ರಾ ರೆಡ್ಡಿ ನಾಯಕಿಯಾಗಿ ನಟಿಸಿದ್ದರು. ಇದೀಗ ಸಿನಿಮಾಟೋಗ್ರಾಫರ್ ಆಗಿರುವ ರಾಕೇಶ್ ಸಮಾಲಾ ಜೊತೆ ಸಿಂಪಲ್ಲಾಗಿ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ರಾಕೇಶ್ ನಿರ್ಮಾಪಕರು ಹೌದು ಎಂದು ಹೇಳಲಾಗುತ್ತಿದೆ. ರಾಕೇಶ್ ಹುಟ್ಟುಹಬ್ಬದ ದಿನ ಅವರ ಜೊತೆಗಿರುವ ಫೋಟೋ ಹಾಕಿ ತಾನು ಪ್ರೀತಿಯಲ್ಲಿದ್ದೇನೆ ಎಂಬ ಸುಳಿವನ್ನು ಚೈತ್ರಾ ನೀಡಿದ್ದರು.

‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಚೈತ್ರಾ ರೆಡ್ಡಿ ಅವರು ತಮಿಳಿನಲ್ಲಿ ‘ಕಲ್ಯಾಣಂ ಮುಧಾಲ್ ಕಾಧಲ್ ವರೈ’ ಧಾರಾವಾಹಿಯಲ್ಲಿ ನಟಿಸಿದ್ದರು. ಆಮೇಲೆ ‘ಯಾರದಿ ಮೋಹಿನಿ’ ಸೀರಿಯಲ್‌ನಲ್ಲಿ ನಟಿಸಿದ್ದರು. ನಟ ವಿನೋದ್ ಪ್ರಭಾಕರ್ ಜೊತೆಗೆ ‘ರಗಡ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.

- Advertisement -

Latest News

error: Content is protected !!