Thursday, June 4, 2026
Homeಕರಾವಳಿಕಾಸರಗೋಡಿನ ಮಸೀದಿಗೆ ಹರಕೆ ರೂಪದಲ್ಲಿ ಕುದುರೆ ನೀಡಿದ ಭಕ್ತ

ಕಾಸರಗೋಡಿನ ಮಸೀದಿಗೆ ಹರಕೆ ರೂಪದಲ್ಲಿ ಕುದುರೆ ನೀಡಿದ ಭಕ್ತ

- Advertisement -
- Advertisement -

ಕಾಸರಗೋಡು: ಭಕ್ತರ ತಮ್ಮ ಪ್ರಾರ್ಥನೆ ಈಡೇರಿದಾಗ ಬೇರೆ ಬೇರೆ ರೂಪದಲ್ಲಿ ಹರಕೆ ತೀರಿಸೋದನ್ನು ನೋಡಿದ್ದೇವೆ. ಆದರೆ ಕಾಸರಗೋಡಿನ ಮಸೀದಿಯೊಂದಕ್ಕೆ ಭಕ್ತರೊಬ್ಬರು ಹರಕೆ ರೂಪದಲ್ಲಿ ಕುದುರೆ ನೀಡಿದ್ದಾರೆ. ಇಲ್ಲಿನ ತಳಂಗರೆ ಮಾಲಿಕ್ ದೀನಾರ್ ದೊಡ್ಡ ಜಮಾಅತ್ ಮಸೀದಿಗೆ ತುಮಕೂರು ನಿವಾಸಿ ಮಹಮ್ಮದ್ ಶಂಸೀರ್ ಎಂಬ ಭಕ್ತ ಕುದುರೆಯನ್ನು ಹರಕೆ ರೂಪದಲ್ಲಿ ಸಮರ್ಪಿಸಿದ್ದಾರೆ.


ತನ್ನ ಬೇಡಿಕೆಯೊಂದು ಈಡೇರಿದಲ್ಲಿ ಹರಕೆ ನೀಡುವುದಾಗಿ ಕೇಳಿಕೊಂಡಂತೆ ಈ ಹರಕೆ ಸಲ್ಲಿಸಿದ್ದು ಕುದುರೆಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಹರಕೆ ರೂಪದಲ್ಲಿ ಬಂದ ಕುದುರೆಯನ್ನು ಹರಾಜು ಹಾಕಲು ಮಸೀದಿ ಸಮಿತಿ ತೀರ್ಮಾನಿಸಿದ್ದು, ಇದಕ್ಕೂ ಮೊದಲು ಅರಣ್ಯ ಇಲಾಖೆ ಅನುಮತಿ ಕೇಳುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಕುದುರೆ ಸಮರ್ಪಣೆ ನಡೆದಿದೆ .

- Advertisement -

Latest News

error: Content is protected !!