Friday, June 5, 2026
Homeಕೊಡಗು9 ವರ್ಷದ ಮಗಳನ್ನು ಕೊಂದು ತಾನು ನೇಣಿಗೆ ಶರಣಾದ ಕೊಡಗಿನ ದಂತ ವೈದ್ಯೆ

9 ವರ್ಷದ ಮಗಳನ್ನು ಕೊಂದು ತಾನು ನೇಣಿಗೆ ಶರಣಾದ ಕೊಡಗಿನ ದಂತ ವೈದ್ಯೆ

- Advertisement -
- Advertisement -

ಬೆಂಗಳೂರು: 9 ವರ್ಷದ ಮಗಳನ್ನು ಕೊಂದು ಕೊಡಗಿನ ದಂತ ವೈದ್ಯೆ ತಾನು ನೇಣಿಗೆ  ಶರಣಾದ ಘಟನೆ ಬೆಂಗಳೂರಿನ ಬನಶಂಕರಿಯ ಕಾವೇರಿನಗರದಲ್ಲಿ ನಡೆದಿದೆ.  ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ದಂತ ವೈದ್ಯೆ ಶೈಮಾ ಮುತ್ತಪ್ಪ ಅವರು ತನ್ನ ಮಗಳು ಆರಾಧನಾ (9)ಳನ್ನು ನೇಣು ಬಿಗಿದು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂರು ದಿನಗಳ ಹಿಂದೆ ನಡೆದಿರುವ ಈ ಶಂಕಾಸ್ಪದ ಆತ್ಮಹತ್ಯೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 10 ವರ್ಷಗಳ ಹಿಂದೆ ದಂತ ವೈದ್ಯ ತರಬೇತಿಯ ವೇಳೆ ನಾರಾಯಣ್ ರನ್ನು ಪ್ರೀತಿಸಿ ಶೈಮಾ ಮುತ್ತಪ್ಪ ವಿವಾಹವಾಗಿದ್ದರು. ಶೈಮಾ ಅವರ ಪ್ರೇಮದ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲೇ ಶೈಮಾ ತಾಯಿ ಸಹ ಮೃತಪಟ್ಟಿದ್ದರು. ನಂತರ ಕುಟುಂಬವನ್ನು ಒಪ್ಪಿಸಿ ವಿವಾಹವಾಗಿದ್ದರು.

ಪತಿ ನಾರಾಯಣ್ ಕ್ಲಿನಿಕ್ ಗೆ ತೆರಳಿದ್ದಾಗ ಶೈಮಾ ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಶೈಮಾ ಸಹೋದರ ಆಸ್ಟ್ರೇಲಿಯಾದಲ್ಲಿದ್ದಾರೆ.ಇಂದು ಸಹೋದರ ಬಂದು ಪೊಲೀಸರಿಗೆ ದೂರು ನೀಡಿದ್ದು ಅದನ್ನು ಆಧರಿಸಿ ಪ್ರಕರಣ ದಾಖಲಿಸಿರುವ ಬನಶಂಕರಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -

Latest News

error: Content is protected !!