Thursday, June 4, 2026
Homeತಾಜಾ ಸುದ್ದಿಈ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಸುರತ್ಕಲ್ ದೀಕ್ಷಾ ಶೆಟ್ಟಿ ಆಯ್ಕೆ

ಈ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಸುರತ್ಕಲ್ ದೀಕ್ಷಾ ಶೆಟ್ಟಿ ಆಯ್ಕೆ

- Advertisement -
- Advertisement -

ಮಂಗಳೂರು: ಬಹುಮುಖ ಪ್ರತಿಭೆ, ಯಕ್ಷಗಾನ, ಪೂಜಾ ಕುಣಿತ ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿರುವ ಕು.ದೀಕ್ಷಾ ಎಂ ಶೆಟ್ಟಿ ಇವರು ಕರ್ನಾಟಕ ಸರ್ಕಾರದ 2020-21ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸರಕಾರಿ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಅವರು ಮಾಧವ ಎಸ್. ಶೆಟ್ಟಿ ಬಾಳ, ಯಕ್ಷವೈಭವ ಕಾಟಿಪಳ್ಳ ಹಾಗೂ ಮೀರಾವಾಣಿ ಎಂ. ಶೆಟ್ಟಿ ಜಪ್ಪುಗುಡ್ಡೆ ಗುತ್ತು ದಂಪತಿಯ ಪುತ್ರಿ.

- Advertisement -

Latest News

error: Content is protected !!