Wednesday, June 3, 2026
Homeಕರಾವಳಿಮಂಗಳೂರಿನಲ್ಲಿ ಮಾಡೆಲಿಂಗ್ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

ಮಂಗಳೂರಿನಲ್ಲಿ ಮಾಡೆಲಿಂಗ್ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

- Advertisement -
- Advertisement -

ಮಂಗಳೂರು : ಮಾಡೆಲಿಂಗ್ ಮಾಡುತ್ತಿದ್ದ ಯುವತಿಯೊಬ್ಬಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲದ ಕುಂಪಲ ಆಶ್ರಯಕಾಲನಿಯಲ್ಲಿ ನಡೆದಿದೆ.

ಆಶ್ರಯ ಕಾಲನಿ ನಿವಾಸಿ ಚಿತ್ತಪ್ರಸಾದ್ ಎಂಬುವವರ ಪುತ್ರಿ ಪ್ರೇಕ್ಷಾ (17) ಶವವಾಗಿ ಪತ್ತೆಯಾದಾಕೆ. ಮಂಗಳೂರು ನಂತೂರು ಬಳಿಯ ನಿಟ್ಟೆ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದು, ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು.

ಮಧ್ಯಾಹ್ನ ವೇಳೆ ತಾಯಿ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಮನೆಯ ಕೋಣೆಯೊಳಗೆ ಪ್ರೇಕ್ಷಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇನ್ನು‌ ಈಕೆ ಮಾಡೆಲಿಂಗ್ ಮಾಡುತ್ತಿದ್ದಳು ಅನ್ನೋ ಮಾಹಿತಿ‌ ಲಭ್ಯವಾಗಿದೆ.

- Advertisement -

Latest News

error: Content is protected !!