Thursday, June 4, 2026
Homeಕರಾವಳಿಉಡುಪಿಕಾಪು ಗುಜರಿ ಅಂಗಡಿ ಬೆಂಕಿ ಪ್ರಕರಣದ ಸಾವಿನ ಸಂಖ್ಯೆ 3ಕ್ಕೆ ಏರಿಕೆ: ಆಸ್ಪತ್ರೆಯಲ್ಲಿ ಗಾಯಾಳು ನಿಯಾಜ್...

ಕಾಪು ಗುಜರಿ ಅಂಗಡಿ ಬೆಂಕಿ ಪ್ರಕರಣದ ಸಾವಿನ ಸಂಖ್ಯೆ 3ಕ್ಕೆ ಏರಿಕೆ: ಆಸ್ಪತ್ರೆಯಲ್ಲಿ ಗಾಯಾಳು ನಿಯಾಜ್ ಸಾವು

- Advertisement -
- Advertisement -

ಉಡುಪಿ: ಕಾಪು ತಾಲೂಕಿನಲ್ಲಿ ನಡೆದ ಮಲ್ಲಾರು ಗುಜರಿ ಅಂಗಡಿ ಬೆಂಕಿ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸ್ಫೋಟದಿಂದ ಗಾಯಗೊಂಡ ನಿಯಾಜ್ ಎಂಬ ಯುವಕ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಅಗ್ನಿಶಾಮಕದಳದ ಸತತ ಕಾರ್ಯಾಚರಣೆಯಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಮಲ್ಲಾರು ಫಕೀರನ‌ಕಟ್ಟೆ ಮಸೀದಿ ಬಳಿ ನಡೆದ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು ಮೂರು ಮಂದಿಗೆ ಗಾಯಗಳಾಗಿವೆ

ಉಡುಪಿ ಅಗ್ನಿಶಾಮಕದಳ ಹಾಗೂ ಐಎಸ್ ಪಿಆರ್ ಎಲ್ ಅಗ್ನಿಶಾಮಕ ದಳದ ಕಾರ್ಯಾಚರಣೆ ಮೂಲಕ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹಬ್ಬುವುದನ್ನು ತಡೆಯಲಾಗಿದೆ. ಸ್ಥಳಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!