Friday, June 26, 2026
Homeತಾಜಾ ಸುದ್ದಿಇದು ಪ್ರತಿಯೊಬ್ಬ ಭಾರತೀಯನು ಓದಲೇಬೇಕಾದ ಸ್ಟೋರಿ:  ಈ ಯುವಕನ ಛಲ ನಿಮ್ಮೆಲ್ಲರನ್ನು ಬಡಿದೆಬ್ಬಿಸುತ್ತೆ

ಇದು ಪ್ರತಿಯೊಬ್ಬ ಭಾರತೀಯನು ಓದಲೇಬೇಕಾದ ಸ್ಟೋರಿ:  ಈ ಯುವಕನ ಛಲ ನಿಮ್ಮೆಲ್ಲರನ್ನು ಬಡಿದೆಬ್ಬಿಸುತ್ತೆ

- Advertisement -
- Advertisement -

ನವದೆಹಲಿ:  ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ 19 ವರ್ಷದ ಪ್ರದೀಪ್ ಮೆಹ್ರಾ ಎಂಬ ಯುವಕ ಸಿಕ್ಕಾಪಟ್ಟೆ  ಹವಾ ಸೃಷ್ಟಿಸಿದ್ದಾನೆ. ಈತನ ಮಾತುಗಳು ಅದೆಷ್ಟೋ ಯುವಕರನ್ನು ಬಡಿದೆಬ್ಬಿಸುವಂತೆ ಮಾಡಿದೆ.

ಅಷ್ಟಕ್ಕೂ ಏನ್ ಇವನ ಕಥೆ ನೋಡೋಣ. ಪ್ರದೀಪ್ ಮೆಹ್ರಾ  ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುವ ಒಬ್ಬ ಬಡ ಕುಟುಂಬದ ಯುವಕ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿರುವ ಅಮ್ಮಾ, ಇಷ್ಟೆಲ್ಲದರ ಮಧ್ಯೆ ಪ್ರದೀಪ್ ಮೆಹ್ರಾಗೆ ದೇಶಸೇವೆ ಮಾಡಬೇಕು ಅನ್ನೋ ತುಡಿತ. ಸೇನೆಗೆ ಸೇರಲೇ ಬೇಕು ಎಂದು ಪಣ ತೊಟ್ಟಿರುವ ಪ್ರದೀಪ್ ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಮನೆ ಸೇರುತ್ತಾನೆ. ಆ ಮೂಲಕ ಭಾರತೀಯ ಸೇನೆ ಸೇರಿಕೊಳ್ಳಲು ಈತ ಕಠಿಣ ಅಭ್ಯಾಸ ನಡೆಸುತ್ತಿದ್ದಾನೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರದೀಪ್ ಮೆಹ್ರಾ ಯುವಕನ ವಿಡಿಯೋ ಭಾರಿ ವೈರಲ್ ಆಗಿದೆ. ಇದ್ದಕ್ಕಿದ್ದಂತೆ 19ರ ಹರೆಯದ ಈ ಪ್ರದೀಪ್ ಮೆಹ್ರಾ ದೇಶದ ಸ್ಪೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ. ಸೆಲೆಬ್ರೆಟಿಗಳು, ರಾಜಕಾರಣಿಗಳು ಸೇರಿದಂತೆ ಬಹುತೇಕರು ಪ್ರದೀಪ್ ಮೆಹ್ರಾ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.  

- Advertisement -

Latest News

error: Content is protected !!