Saturday, June 27, 2026
Homeಕರಾವಳಿಪುತ್ತೂರಿನ ಸವಣೂರಿನಲ್ಲಿ ಟ್ಯಾಂಕಿಯಲ್ಲಿ ವ್ಯಕ್ತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

ಪುತ್ತೂರಿನ ಸವಣೂರಿನಲ್ಲಿ ಟ್ಯಾಂಕಿಯಲ್ಲಿ ವ್ಯಕ್ತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

- Advertisement -
- Advertisement -

ಪುತ್ತೂರು: ಇಲ್ಲಿ ಸವಣೂರಿನ ಬರೆಪ್ಪಾಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ದಾಮೋದರ ಗೌಡ (56) ಎಂದು ಗುರುತಿಸಲಾಗಿದೆ. ದಾಮೋದರ ಗೌಡ ಅವರ ಮೃತದೇಹ ಮನೆಯ ಸಮೀಪದ ಟ್ಯಾಂಕಿಯಲ್ಲಿ ಪತ್ತೆಯಾಗಿದ್ದು, ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಆಗಲಿದ್ದಾರೆ.

- Advertisement -

Latest News

error: Content is protected !!