Friday, June 5, 2026
Homeತಾಜಾ ಸುದ್ದಿಚಿಕ್ಕಮಗಳೂರು: ದಲಿತ ಯುವಕನಿಗೆ ಠಾಣೆಗೆ ಕರೆಸಿ ಮೂತ್ರ ಕುಡಿಸಿದ ಪಿಎಸ್ಸೈ!

ಚಿಕ್ಕಮಗಳೂರು: ದಲಿತ ಯುವಕನಿಗೆ ಠಾಣೆಗೆ ಕರೆಸಿ ಮೂತ್ರ ಕುಡಿಸಿದ ಪಿಎಸ್ಸೈ!

- Advertisement -
- Advertisement -

ಮೂಡಿಗೆರೆ: ಇಡೀ ಪೊಲೀಸ್ ವ್ಯವಸ್ಥೆಯೇ ತಲೆ ತಗ್ಗಿಸುಂತಹ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ದಲಿತ ಯುವಕನಿಗೆ ವಿಚಾರಣೆ ನೆಪದಲ್ಲಿ ಪೊಲೀಸ್ ಅಧಿಕಾರಿ ಮೂತ್ರ ಕುಡಿಸಿದ್ದಾನೆ ಎಂದು ವರದಿಯಾಗಿದೆ.

ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಪೊಲೀಸ್ ಅಧಿಕಾರಿಯೋರ್ವನ ಕೃತ್ಯ ಮತ್ತೆ ಇಲಾಖೆ ಮೇಲೆ ಜನರು ಕೆಟ್ಟ ಭಾವನೆಯನ್ನು ಹೊಂದುವಂತೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಅಭಿಯಾನ ನಡೆಸಿ ಇನ್ಸ್ ಪೆಕ್ಟರ್ ಕೃತ್ಯವನ್ನು ಖಂಡಿಸಲಾಗುತ್ತಿದೆ. ಬಿಹಾರ , ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ದಲಿತ ಯುವಕನಿಗೆ ಮೂತ್ರ ಕುಡಿಸಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬ ರಾಕ್ಷಸ. ಈ ಯುವಕನಿಗೆ ಆಗಿರುವ ಅವಮಾನ, ಅನ್ಯಾಯಕ್ಕೆ ನ್ಯಾಯ ಬೇಕಿದೆ ಎಂದು ಕೋರಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!