Monday, May 6, 2024
Homeಜ್ಯೋತಿಷ್ಯಮಂಗಳವಾರದ ನಿತ್ಯಭವಿಷ್ಯ: ಈ ದಿನದ ರಾಶಿಫಲದೊಂದಿಗೆ ಉತ್ತಮ ಬಣ್ಣ, ಶುಭ ಸಂಖ್ಯೆ, ಶುಭ ಸಮಯದ ಸಂಪೂರ್ಣ...

ಮಂಗಳವಾರದ ನಿತ್ಯಭವಿಷ್ಯ: ಈ ದಿನದ ರಾಶಿಫಲದೊಂದಿಗೆ ಉತ್ತಮ ಬಣ್ಣ, ಶುಭ ಸಂಖ್ಯೆ, ಶುಭ ಸಮಯದ ಸಂಪೂರ್ಣ ಮಾಹಿತಿ

spot_img
- Advertisement -
- Advertisement -

ಮೇಷ ರಾಶಿ:
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರಿಗೆ ಉತ್ತಮ ಲಾಭದಾಯಕವಾಗಲಿದೆ. ಗುತ್ತಿಗೆ ವ್ಯವಹಾರ ಮಾಡುತ್ತಿರುವವರಿಗೆ ಮರು ಪಾವತಿ ವಿಳಂಬ ಸಾಧ್ಯತೆ ಹಾಗೂ ಹೊಸ ಗುತ್ತಿಗೆಗಳು ದೊರೆಯುವ ಸಂದರ್ಭವಿದೆ. ಶುಭ ಕಾರ್ಯಗಳ ಬಗ್ಗೆ ಮನೆಯಲ್ಲಿ ಚರ್ಚೆ ಗೋಚರಿಸಲಿವೆ. ಗುತ್ತಿಗೆ ಕಾರ್ಮಿಕರ ಕಾಯಂಗೊಳಿಸಲು ಮಧ್ಯಸ್ಥಿಕೆ ಜನರನ್ನು ನಂಬಬೇಡಿ. ಉದ್ಯೋಗಸ್ಥರಿಗೆ ಕೆಲಸದಲ್ಲಿ ತೊಂದರೆ ಇದ್ದರೂ, ಹೊಸ ಉಪಾಯ ಕಂಡುಕೊಂಡು ಅದರಂತೆ ಪರಿಹರಿಸಿಕೊಳ್ಳುವಿರಿ. ನಿಮ್ಮ ನೇರ ಮಾತಿನಿಂದ ಮೇಲಾಧಿಕಾರಿ ಹಾಗೂ ಸಹೋದ್ಯೋಗಿ ವೈರಿಗಳಾಗಿ ಹುಟ್ಟಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳು ಬರೆಯುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮತ್ತು ಸಹಕಾರ ದೊರೆತು ಯಶಸ್ಸು ಗಳಿಸುವಿರಿ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 30
ಶುಭ ಸಮಯ: ಮಧ್ಯಾಹ್ನ 1 ರಿಂದ 7 ರವರೆಗೆ

ವೃಷಭರಾಶಿ:
ಮಧ್ಯ , ದ್ರವ್ಯ ,ಲೋಹ, ದಿನಸಿ, ವಸ್ತ್ರದ ವ್ಯಾಪಾರಸ್ಥರಿಗೆ ವ್ಯವಹಾರಗಳಲ್ಲಿ ಚೇತರಿಕೆ. ಮಂಗಳಕಾರ್ಯದ ಪ್ರಯತ್ನ ನಿಧಾನವಾದರೂ ಪ್ರಗತಿ ನಿಶ್ಚಿತ. ತುಂಬಾ ದಿನದ ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ಮಕ್ಕಳ ನಡವಳಿಕೆ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ವಾಹನ ಮಾರಾಟಗಾರರಿಗೆ ಮಾರಾಟದಲ್ಲಿ ಚೇತರಿಕೆ. ದಲ್ಲಾಳಿ ವ್ಯವಹಾರಸ್ಥರಿಗೆ ಹಣಕಾಸಿನಲ್ಲಿ ತೊಂದರೆ. ಕೃಷಿಕರಿಗೆ ನಷ್ಟವಿರುವುದಿಲ್ಲ, ಸರಕಾರದ ವತಿಯಿಂದ ಧನಸಹಾಯ ಭಾಗ್ಯ. ಕೃಷಿ ವಿಜ್ಞಾನ ಓದಿದ ವಿದ್ಯಾವಂತರಿಗೆ ಸರಕಾರಿ ನೌಕರಿಯ ಭಾಗ್ಯ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 35
ಶುಭ ಸಮಯ: ಬೆಳಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ

ಮಿಥುನ ರಾಶಿ:
ರೇಷ್ಮೆ ಕೃಷಿಕರಿಗೆ ಬೇಡಿಕೆ ಹೆಚ್ಚಾಗಲಿದೆ ಹಾಗೂ ಲಾಭ ಸಿಗಲಿದೆ.ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಚೇತರಿಕೆ ಕಾಣಬಹುದು. ಶುಂಠಿ ಕೃಷಿ ಉತ್ಪನ್ನಕ್ಕೆ ಕಡಿಮೆ ಹಣ ದೊರೆಯುವ ಸಾಧ್ಯತೆ ಕೃಷಿಕರಿಗೆ ಇದೆ. ವಂಶಪಾರಂಪರಿಕ ನಾಟಿ ವೈದ್ಯರಿಗೆ ಬಹು ಬೇಡಿಕೆ, ನಿಮ್ಮ ನಾಟಿ ಔಷಧದಿಂದ ಪ್ರಸಿದ್ಧಿ ಯಾಗುವಿರಿ. ಬೇರೆಯವರ ಮಾತು ಕೇಳಿ ಸಂಸಾರದಲ್ಲಿ ಬಿರುಕು ಸಂಭವ. ಹಣ ಹೂಡಿಕೆ ವಿಚಾರಕ್ಕಾಗಿ ದೊಡ್ಡಮಟ್ಟದಲ್ಲಿ ಹಣವನ್ನು ಯಾವುದೇ ಕಂಪನಿಯ ಮೇಲೆ ಹೂಡಬೇಡಿ. ಸಮಾಜಸೇವಕರು ಹಾಗೂ ರಾಜಕೀಯ ಕ್ಷೇತ್ರದಲ್ಲಿರುವವರು ಸರ್ಕಾರದ ಕೆಲವು ಉನ್ನತಾಧಿಕಾರಿಗಳ ಸಹಾಯದಿಂದ ಜನೋಪಕಾರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಎಲ್ಲರಿಂದ ಪ್ರಶಂಸೆ ಪಡೆವಿಯಿರಿ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 5
ಶುಭ ಸಮಯ: ಸಂಜೆ 6:45 ರಿಂದ 10 ರವರೆಗೆ

ಕಟಕ ರಾಶಿ:
ಸ್ಟೇಷನರಿ, ಹಾರ್ಡ್ವೇರ್, ಸಿಮೆಂಟು ಮರಳು ಇಟ್ಟಿಗೆ, ವ್ಯಾಪಾರಿಗಳಿಗೆ ಆರ್ಥಿಕ ಪ್ರಗತಿ ಕಾಣುವಿರಿ. ಕೃಷಿಕರು ದಿನಸಿ ವ್ಯಾಪಾರಸ್ಥರು ಕೂಡಿಟ್ಟ ಧಾನ್ಯಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ಈಗ ಮಾರಾಟಕ್ಕೆ ಯೋಗ್ಯವಾಗಿದೆ. ಲೇವಾದೇವಿಗಾರರಿಗೆ ಧನ ಸಂಗ್ರಹ ಉತ್ತಮವಾಗಿರುತ್ತದೆ. ಔಷಧಿ ಮಾರಾಟಗಾರರು ಔಷಧಿಯ ದಿನಾಂಕದ ಬಗ್ಗೆ ಜಾಗ್ರತೆವಹಿಸಿ. ಸಿದ್ದ ಉಡುಪು ವ್ಯಾಪಾರ ಹೆಚ್ಚಾಗಿ ಲಾಭವೂ ಹೆಚ್ಚುವುದು. ರಾಸಾಯನಿಕ ಗೊಬ್ಬರ , ಬೀಜ ತಯಾರಕರಿಗೆ ಹೆಚ್ಚಿನ ತಯಾರಿಕೆಗೆ ಆದೇಶ ಬರುವುದು. ವಿದೇಶದಲ್ಲಿ ಶಿಕ್ಷಣ ಮಾಡುತ್ತಿರುವವರಿಗೆ ಆತ್ಮ ಭಯ ತೊಂದರೆ ಕಾಣಲಿದೆ. ನಿಮ್ಮ ಎಲ್ಲ ವ್ಯವಹಾರಗಳಿಗೆ ಸಂಗಾತಿಯ ಬೆಂಬಲ ದೊರೆತು ಮನೆ ಕಟ್ಟುವಿರಿ. ತಂದೆಯಿಂದ ನಿಮಗೆ ಆಸ್ತಿ ವ್ಯವಹಾರದ ವರ್ಗಾವಣೆ ಆಗಬಹುದು.
ಉತ್ತಮ ಬಣ್ಣ: ಕಡು ನೀಲಿ
ಶುಭ ಸಂಖ್ಯೆ: 18
ಶುಭ ಸಮಯ: ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ

ಸಿಂಹ ರಾಶಿ :
ಮಧ್ಯಪಾನ ಧೂಮಪಾನ ತ್ಯಜಿಸಿದರೆ ನಿಮಗೆ ಮುಂದಿನ ದಿನಗಳು ಒಳ್ಳೆಯದಾಗಲಿದೆ. ತೈಲೋತ್ಪನ್ನಗಳ ಮಾರಾಟಗಾರರಿಗೆ ಹೆಚ್ಚಿನ ಕಮಿಷನ್ ದೊರೆಯುವ ಸಾಧ್ಯತೆ ಇದೆ. ಕೃಷಿಕರು ಹೊಸ ಯಂತ್ರಗಳ ಖರೀದಿಸುವಿರಿ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಸಾಧ್ಯತೆ. ಯಂತ್ರಗಳನ್ನು ಮಾರುವ ಮಧ್ಯವರ್ತಿಗಳಿಗೆ ಈಗ ವ್ಯವಹಾರ ಚೇತರಿಕೆಯ ಕಾಲ. ಕೃಷಿಕರು ಕೂಡಿಟ್ಟ ದವಸ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿನ ಹಣಕಾಸಿನ ನಿರ್ವಹಣೆಯ ವಿಚಾರದಲ್ಲಿ ನಿಮ್ಮ ಮಾತಿಗೆ ಬಹಳ ಮಹತ್ವ ಬರುತ್ತದೆ. ಮದುವೆ ಕಾರ್ಯಗಳಿಂದ ನಿಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಮಕ್ಕಳಿಂದ ನಿಮ್ಮ ಸಾಲ ಮುಕ್ತಾಯಗೊಳ್ಳುತ್ತದೆ.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 5
ಶುಭ ಸಮಯ: ಸಂಜೆ 5 ರಿಂದ 9:40ರವರೆಗೆ

ಕನ್ಯಾ ರಾಶಿ:
ಆಕಸ್ಮಿಕ ಶುಭಕಾರ್ಯಕ್ಕೆ ತಾವು ಪಾಲ್ಗೊಳ್ಳುವಿಕೆಯಿಂದ ಬಂಧುಗಳೊಡನೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ನೌಕರರಿಗೆ ನಿಂತಿದ್ದ ಬಾಕಿ ಇಂಕ್ರಿಮೆಂಟ್ ಈಗ ಸಿಗಲಿದೆ. ಮಗಳ ಕುಟುಂಬ ಕಲಹ ಒದಗಿದ್ದ ತೊಂದರೆಗಳು ನಿವಾರಣೆಯಾಗಲಿದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ಮುಂದುವರೆಯುವುದು. ಶೀತ ಪ್ರವೃತ್ತಿ ಇರುವವರು ಜನಸಮೂಹ ಇರುವ ಕಡೆ ತಿರುಗಾಟ ಬೇಡ. ಸಂಗಾತಿಯು ನಿಮ್ಮ ಕೆಲವು ಕೆಟ್ಟ ಮಾತುಗಳಿಂದ ದೂರ ಸರಿಯುವ ಸಾಧ್ಯತೆ. ಮಾತಾಪಿತೃ ಆಸ್ತಿ ಪಾಲುದಾರಿಕೆ ಮಾತುಗಳಿಗೆ ಸಿಟ್ಟಾಗಬಹುದು. ಅನಿರೀಕ್ಷಿತ ವೈದ್ಯಕೀಯ ಖರ್ಚು ಸಂಭವ. ಪತ್ನಿಯ ಬಂಧು ಬಳಗದಿಂದ ಹಣದ ಸಹಾಯ ನಿರೀಕ್ಷಿಸಬಹುದು.
ಉತ್ತಮ ಬಣ್ಣ: ಗಾಡ ಹಳದಿ
ಶುಭ ಸಂಖ್ಯೆ: 9
ಶುಭ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 12:30 ರವರೆಗೆ

ತುಲಾ ರಾಶಿ:
ಹಣಕಾಸಿನ ಸ್ಥಿತಿಯು ಬಲ ಪುಷ್ಟಿ ಆಗುವುದು. ತಂತ್ರಜ್ಞಾನ ಪದವಿ ಹೊಂದಿದವರು ಉದ್ಯೋಗ ಅಭಿರುಚಿ ತಕ್ಕಂತೆ ಉದ್ಯೋಗ ಸಿಗುವ ಸಾಧ್ಯತೆಯಿದೆ, ಸಿಗುವ ಭಾಗ್ಯ ನೆನೆದು ಮುಂದೆವರೆಯಿರಿ. ಸಮಾಜ ಸೇವಕರು ಮತ್ತು ರಾಜಕಾರಣಿಗಳಿಗೆ ವಿಶೇಷ ಸೂಚನೆ ಸಾಮಾಜಿಕ ಕಾರ್ಯಗಳನ್ನು ಮಾಡುವಾಗ ಆಶ್ವಾಸನೆ ನೀಡಬೇಡಿ, ಕೆಲಸಗಳಿಗೆ ಸ್ಪಂದಿಸಿ ಇದರಿಂದ ನಿಮ್ಮ ಸಾಮರ್ಥ್ಯ ವೃದ್ಧಿಯಾಗುವುದು. ಉನ್ನತ ಮೂಲಗಳಿಂದ ತಮಗೆ ಪದವಿ ಪ್ರಾಪ್ತಿ. ಸರ್ಕಾರಿ ಕೆಲಸ ಪ್ರಯತ್ನಿಸಿದವರಿಗೆ ಯಶಸ್ಸು ಕಾಣಬಹುದು.ಸಂತಾನ ಕಡೆ ಹೆಚ್ಚಿನ ಗಮನ ವಹಿಸುವುದು ಉತ್ತಮ. ಶಿಕ್ಷಕವೃಂದವರಿಗೆ ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ವೇತನ ಸಿಗಲಿದೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಜರುಗುವುದು.
ಉತ್ತಮ ಬಣ್ಣ: ಮರೂನ್
ಶುಭ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 2 ರಿಂದ 4:20ರವರೆಗೆ

ವೃಶ್ಚಿಕ ರಾಶಿ:
ಯುವ ರಾಜಕೀಯ ಆಶೆ ಆಕಾಂಕ್ಷೆಗಳಿಗೆ ಮತ್ತು ರಾಜಕೀಯದಲ್ಲಿರುವವರು ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಸ್ಥಾನಮಾನ ಪಡೆಯುವರು. ಮಿಲಿಟರಿ ಹುದ್ದೆಗಳಲ್ಲಿರುವ ಸೈನಿಕರಿಗೆ ಪ್ರಮೋಷನ್ ಭಾಗ್ಯ. ರಜೆಗಳ ಸಮಸ್ಯೆ ನಿವಾರಣೆಯಾಗಲಿದೆ. ಕುಟುಂಬದ ಜೊತೆ ಸೇರುವ ಅವಕಾಶ ಸಿಗುತ್ತದೆ. ಮಿತ್ರರ ಮಧ್ಯಸ್ಥಿಕೆಯಿಂದ ವ್ಯವಹಾರದಲ್ಲಿ ಸಮಸ್ಯೆ ಉಲ್ಬಣ ಸಾಧ್ಯತೆ. ಮಗಳ ಕುಟುಂಬ ಸಮಸ್ಯೆ ಬಗೆಹರಿಯಲಿದೆ. ಆಸ್ತಿಯ ವಿವಾದಗಳು ಪರಿಹಾರವಾಗಲಿದೆ. ಮದುವೆ ವಿಚಾರಕ್ಕಾಗಿ ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು. ಎಲ್ಲಾ ವ್ಯಾಪಾರಸ್ಥರಿಗೆ ಧನಾದಾಯವು ಸಾಮಾನ್ಯ. ಮೂಲ ಕಸುಬುದಾರರಿಗೆ ಕೆಲವೊಂದು ಉತ್ತಮ ಪಾಲುದಾರಿಕೆಯ ವ್ಯವಹಾರದಲ್ಲಿ ನಿಮಗೆ ಅವಕಾಶ ದೊರೆತು ನಿಮ್ಮ ನಿಮ್ಮ ವ್ಯಾಪಾರ ಅಭಿವೃದ್ಧಿ ಆಗುತ್ತದೆ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 6
ಶುಭ ಸಮಯ: ಮಧ್ಯಾಹ್ನ 12:20 ರಿಂದ ಸಂಜೆ 4 ರವರೆಗೆ

ಧನಸ್ಸು ರಾಶಿ:
ಸಾರಿಗೆ ನೌಕರರು ತುಂಬಾ ಸಮಸ್ಯೆಗಳಿದ್ದಲ್ಲಿ ಮುಂದಿನ ದಿನ ಒಳ್ಳೆಯದಾಗಲಿದೆ. ಉದ್ಯೋಗ ತ್ಯಜಿಸುವುದು ಬೇಡ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಜೇಷ್ಠತೆಯ ಆಧಾರದ ಮೇಲೆ ಪ್ರಮೋಷನ್ ಸಿಗಬಹುದು. ಕೃಷಿಕರು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಸರ್ಕಾರಿ ಸಾಲಗಳು ಸಿಗುತ್ತವೆ. ಕೃಷಿಕರು ಕೂಡಿಟ್ಟ ದವಸದಾನ್ಯ ಇಂದು ಮಾರಾಟ ಮಾಡಿದರೆ ಉತ್ತಮ ಬೆಂಬಲ ಬೆಲೆ ಸಿಗುವುದು. ರಾಜಕಾರಣಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಹಣದ ಒಳ ಹರಿವು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ. ತಂತ್ರಜ್ಞಾನ ಪದವಿ , ಕೃಷಿ ಪದವಿ ನೂತನ ಉದ್ಯೋಗಕ್ಕಾಗಿ ಪ್ರಯತ್ನಪಡುತ್ತಿರುವವರಿಗೆ ಸೂಕ್ತ ಉದ್ಯೋಗದ ಸಾಧ್ಯತೆ ಇದೆ. ಶಿಕ್ಷಕವೃಂದವರು ಗೃಹನಿರ್ಮಾಣ ಕಾರ್ಯ ಆರಂಭಿಸುವವರಿಗೆ ಉತ್ತಮ.
ಉತ್ತಮ ಬಣ್ಣ: ಕೇಸರಿ
ಶುಭ ಸಂಖ್ಯೆ: 33
ಶುಭ ಸಮಯ: ಬೆಳಗ್ಗೆ 8:25 ರಿಂದ ಮಧ್ಯಾಹ್ನ 12:55ರವರೆಗೆ

ಮಕರ ರಾಶಿ:
ಪೌರಕಾರ್ಮಿಕರಿಗೆ ಸಾಲದ ಹೊರೆಯಾಗಲಿದೆ ಇದರಿಂದ ಸಾಲದ ಚಿಂತನೆ ಕಾಡಲಿದೆ. ಮದುವೆಯ ಭರವಸೆ ಕೇಳಿ ಮನ ಸಂತಸ ಗೊಳ್ಳುವುದು. ಕುಟುಂಬಕ್ಕಾಗಿ ಚಿನ್ನಾಭರಣ ಖರೀದಿಸುವಿರಿ. ತಾಂತ್ರಿಕ ಪರಿಣತರಿಗೆ ಬೇಡಿಕೆ ಹೆಚ್ಚಾಗಲಿದೆ ಹಣಗಳಿಸುವ ಕಾಲ ಕೂಡಿಬಂದಿದೆ ಪ್ರಯತ್ನ ಇರಲಿ. ಪ್ರಿಂಟಿಂಗ್ ಪ್ರೆಸ್ ವ್ಯವಹಾರ ಹೆಚ್ಚುತ್ತದೆ ಹಣಗಳಿಸುವ ಸೂಕ್ತ ಕಾಲ. ರಾಜಕೀಯ ವ್ಯಕ್ತಿಗಳಿಗೆ ಕಾರ್ಯಸಾಧನೆಯ ತೃಪ್ತಿದಾಯಕ ಉನ್ನತ ಮೂಲಗಳಿಂದ ಉನ್ನತ ಸ್ಥಾನ ಲಭ್ಯ. ಮಕ್ಕಳ ವಿದೇಶದ ವ್ಯಾಸಂಗಕ್ಕಾಗಿ ವಿಸಾದಲ್ಲಿ ಸಿಗುವುದರಲ್ಲಿ ಅತಂತ್ರ ಸಂಭವ. ದಂಪತಿಗಳಿಗೆ ಸಂತಾನ ಶುಭ ಸಮಾಚಾರ ಒದಗುತ್ತದೆ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 18
ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ಕುಂಭ ರಾಶಿ:
ಉದ್ಯೋಗಸ್ಥರಿಗೆ ಸ್ಥಾನ ಬದಲಾವಣೆಯ ಸದ್ಯಕ್ಕೆ ಬೇಡ . ನಿಮ್ಮ ಮನೋಭಾವ ನೋಡಿ ಕಂಕಣ ಬಲ ಕೂಡಿ ಬರುವುದು. ಹೊಸ ಪಾಲುದಾರರು ನಿಮ್ಮ ಜೊತೆಗೂಡಿ ವ್ಯವಹಾರ ಮಾಡಲು ಬರುವರು, ಹಣಕಾಸಿನ ವ್ಯವಹಾರ ನಿಮ್ಮ ಕೈಯಲ್ಲಿರಲಿ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳಲ್ಲಿ ಪ್ರಮುಖ ಒಪ್ಪಂದಗಳು ಏರ್ಪಡುತ್ತವೆ. ಹೋಟೆಲ್ ಮತ್ತು ಬೇಕರಿ ವ್ಯಾಪಾರಸ್ಥರು ಸಾಕಷ್ಟು ಶ್ರಮವಹಿಸಿ ಸರಿದಾರಿಗೆ ತರುವಿರಿ. ನಿವೇಶನದ ದಾಖಲೆಗಳಲ್ಲಿ ಇದ್ದ ತೊಂದರೆಗಳು ನಿವಾರಣೆಯಾಗಲಿದೆ. ಸಹೋದರ ಮತ್ತು ಸಹೋದರಿಯರ ಜೊತೆ ಸಂಬಂಧ ಸಾಕಷ್ಟು ಸುಧಾರಿಸುತ್ತದೆ. ಪ್ರೇಮಿಗಳ ಸಂಬಂಧ ಹಳಸುವ ಸಾಧ್ಯತೆಯಿದೆ.
ಉತ್ತಮ ಬಣ್ಣ: ತಿಳಿ ಹಸಿರು
ಶುಭ ಸಂಖ್ಯೆ: 31
ಶುಭ ಸಮಯ: ಸಂಜೆ 5:05 ರಿಂದ 9:45 ರವರೆಗೆ

ಮೀನ ರಾಶಿ:
ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಸಹಕಾರ ನೀಡುವರು. ಸಾಲಕ್ಕಾಗಿ ಜಾಮೀನು ನೀಡಿದವರು ಕಷ್ಟ ಅನುಭವಿಸಬೇಕಾಗುವುದು. ನಿಮ್ಮ ಬಾಸ್ ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುವರು. ಕೃಷಿಕರಿಗೆ ಸಂತಸ ವಾಗಲಿದೆ ಸರ್ಕಾರದಿಂದ ನಿಮಗೆ ಬರಬೇಕಾಗಿದ್ದ ಬಾಕಿ ಹಣಗಳು ಈಗ ಬರುತ್ತವೆ. ಬಹುದಿನದಿಂದ ಆರೋಗ್ಯದಲ್ಲಿ ಕಾಡುತ್ತಿರುವ ಸಮಸ್ಯೆ ಸುಧಾರಣೆಯಾಗಿ ಮನಸ್ಸಿನಲ್ಲಿದ್ದ ಆತಂಕಗಳು ನಿವಾರಣೆಯಾಗುತ್ತವೆ. ದಾಂಪತ್ಯದಲ್ಲಿ ಬಿರುಕು ಚಿಂತನೆ ಮಾಡುವಿರಿ. ಟ್ರಾನ್ಸ್ಪೋರ್ಟ್ ವ್ಯವಹಾರಗಳಲ್ಲಿ ಚೇತರಿಕೆ. ಮಹಿಳಾ ಶಕ್ತಿ, ಸಮಾಜ ಸೇವೆಯಿಂದ ಸಂತಸ ತರಲಿದೆ, ಮುಂದಿನ ದಿನ ನಿಮಗೆ ಉನ್ನತ ಪದವಿ ಸಿಗುವ ಭಾಗ್ಯ. ಸಂಗಾತಿಗಾಗಿ ಬಹುದಿನಗಳ ಒಡವೆ ಕೊಳ್ಳುವ ಆಸೆ ಈಡೇರುತ್ತದೆ. ಪ್ರೇಮಿಗಳ ಸಂಬಂಧ ಸ್ವಲ್ಪ ಕಡಿಮೆಯಾಗುತ್ತದೆ. ಕೃಷಿಕರ ವಾಣಿಜ್ಯ ಬೆಳೆಯಲ್ಲಿ ಆದಾಯ ನಿಧಾನವಾಗಿ ಚೇತರಿಕೆ. ಕೃಷಿ ಭೂಮಿಗಾಗಿ ಹೊಸ ತಂತ್ರಜ್ಞಾನ ಅಳವಡಿಸಲು ಸಾಲ ಸೌಲಭ್ಯಗಳು ದೊರೆಯುತ್ತವೆ.
ಉತ್ತಮ ಬಣ್ಣ: ಆಕಾಶ ನೀಲಿ
ಶುಭ ಸಂಖ್ಯೆ: 26
ಶುಭ ಸಮಯ: ಮಧ್ಯಾಹ್ನ 1 ರಿಂದ 3 ಗಂಟೆವರೆಗೆ

- Advertisement -
spot_img

Latest News

error: Content is protected !!