Saturday, May 18, 2024
Homeತಾಜಾ ಸುದ್ದಿಗ್ರಾಮಪಂಚಾಯಿತಿ ಚುನಾವಣೆ- ಮೊದಲ ಹಂತದ ಮತದಾನ ಆರಂಭ

ಗ್ರಾಮಪಂಚಾಯಿತಿ ಚುನಾವಣೆ- ಮೊದಲ ಹಂತದ ಮತದಾನ ಆರಂಭ

spot_img
- Advertisement -
- Advertisement -

ಬೆಂಗಳೂರು:ಇಂದು ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳ್ಳಂಬೆಳಗ್ಗೆ ಎಲ್ಲಾ ಮತಗಟ್ಟೆಗಳತ್ತ ಮತ ಚಲಾವಣೆಗೆ ಜನ ಬರುವ ದೃಶ್ಯ ಕಂಡುಬಂತು. ಇಂದು ರಾಜ್ಯದ 117 ತಾಲೂಕುಗಳ 3,019 ಗ್ರಾಮಪಂಚಾಯಿತಿಗಳಲ್ಲಿನ 43,238 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಮುಂದೆ ಮರು ಮತದಾನ ಅವಶ್ಯಕತೆ ಇದ್ದಾರೆ ಗುರುವಾರ ನಡೆಯಲಿದ್ದು, ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಮೊದಲ ಹಂತದ ಚುನಾವಣೆಗೆ ಒಟ್ಟು 1,21,760 ಮಂದಿ ಸ್ಪರ್ಧಿಸಿದ್ದಾರೆ.ಈ ಪೈಕಿ ಒಟ್ಟು 4,377 ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿ ಇಂದು ಮತದಾನ ಎದುರಿಸಲಿದ್ದಾರೆ.

- Advertisement -
spot_img

Latest News

error: Content is protected !!