Friday, June 5, 2026
Homeತಾಜಾ ಸುದ್ದಿಡಿಕೆಶಿ ಒಡೆತನದ ಶಾಲೆಗೆ ಬಾಂಬ್‌ ಬೆದರಿಕೆ ಪ್ರಕರಣ: ಪರೀಕ್ಷೆ ಮುಂದೂಡುವ ಸಲುವಾಗಿ ವಿದ್ಯಾರ್ಥಿಯಿಂದ ಕಿಡಿಗೇಡಿ ಕೃತ್ಯ

ಡಿಕೆಶಿ ಒಡೆತನದ ಶಾಲೆಗೆ ಬಾಂಬ್‌ ಬೆದರಿಕೆ ಪ್ರಕರಣ: ಪರೀಕ್ಷೆ ಮುಂದೂಡುವ ಸಲುವಾಗಿ ವಿದ್ಯಾರ್ಥಿಯಿಂದ ಕಿಡಿಗೇಡಿ ಕೃತ್ಯ

- Advertisement -
- Advertisement -

ಡಿಕೆಶಿ ಒಡೆತನದ ಬೆಂಗಳೂರಿನ ರಾಜರಾಜೇಶ್ವರಿನಗರದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌’ಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಆತನೇ ಪ್ರಮುಖ ಆರೋಪಿಯಾಗಿದ್ದು, ಆತ ಇ-ಮೇಲ್ ಮೂಲಕ ಬಾಂಬ್‌ ಬೆದರಿಕೆಯ ಸಂದೇಶ ಕಳುಹಿಸಿದ್ದ ಎಂದು ತಿಳಿದುಬಂದಿದೆ.

ಪೋಲಿಸರು ವಶಕ್ಕೆ ಪಡೆದಿರುವ ಬಾಲಕ ಅದೇ ಶಾಲೆಯಲ್ಲಿ ಓದುತ್ತಿದ್ದು, ಪರೀಕ್ಷೆ ಮುಂದೂಡುವ ಸಲುವಾಗಿ ತನ್ನ ತಂದೆ ಮೇಲ್‌ನಿಂದ ಶಾಲೆಗೆ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಬಾಂಬ್ ಬೆದರಿಕೆ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ನಿಯಮಗಳ ಪ್ರಕಾರ ಆತನ ಹೆಸರು ಬಹಿರಂಗಪಡಿಸಲಾಗದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.‌

- Advertisement -

Latest News

error: Content is protected !!