Saturday, June 27, 2026
Homeಕರಾವಳಿಪದ್ಮುಂಜ: ಬೆಳೆ ಸಮೀಕ್ಷೆಗೆ ಪ್ರಾಯೋಗಿಕವಾಗಿ ಚಾಲನೆ

ಪದ್ಮುಂಜ: ಬೆಳೆ ಸಮೀಕ್ಷೆಗೆ ಪ್ರಾಯೋಗಿಕವಾಗಿ ಚಾಲನೆ

- Advertisement -
- Advertisement -

ಪದ್ಮುಂಜ: ಬೆಳೆ ಸಮೀಕ್ಷೆ 2020-21ರ ಸಾಲಿನಲ್ಲಿ ರೈತರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್ ಆಪ್ ಮೂಲಕ ದಾಖಲಿಸಬಹುದಾದ ಬೆಳೆ ಸಮೀಕ್ಷೆಗೆ ಇಂದು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ತಿಮ್ಮಯ್ಯ ಗೌಡರ ಜಮೀನಿನ ಬೆಳೆ ಸಮೀಕ್ಷೆಯ ಮಾಹಿತಿಗಳನ್ನು ದಾಖಲಿಸುದರ ಮೂಲಕ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪದ್ಮುಂಜದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಪ್ರಗತಿಪರ ಕೃಷಿಕರಾದ ಕೃಷ್ಣಪ್ಪ ಗೌಡ ಕರಂಬಾರು,ಮಾಜಿ ತಾ.ಪಂ.ಸದಸ್ಯರಾದ ಮಹಾಬಲ ಗೌಡ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ಉರಂಬುತ್ತಿಮಾರು, ಯುವಮೋರ್ಚಾ ಜಿಲ್ಲಾಸಮಿತಿ ಸದಸ್ಯರಾದ ಯತೀಶ್ ಶೆಟ್ಟಿ ಪಣೆಕ್ಕರ,ಯುವಮೋರ್ಚಾ ತಾಲ್ಲೂಕು ಸಮಿತಿ ಸದಸ್ಯರಾದ ಪ್ರಸ್ತುತ್ ಜೈನ್ ಅಡೆಂಜ, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!