Sunday, May 19, 2024
Homeಕರಾವಳಿಕರೆಂಟಿಲ್ಲದಿದ್ದರೆ ಈ ಗ್ರಾಮಕ್ಕೆ ಮೊಬೈಲ್ ನೆಟ್‌ವರ್ಕ್‌ ಇಲ್ಲ: ಕಣಿಯೂರು ಗ್ರಾಮದ ಈ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್...

ಕರೆಂಟಿಲ್ಲದಿದ್ದರೆ ಈ ಗ್ರಾಮಕ್ಕೆ ಮೊಬೈಲ್ ನೆಟ್‌ವರ್ಕ್‌ ಇಲ್ಲ: ಕಣಿಯೂರು ಗ್ರಾಮದ ಈ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಕನಸಿನ ಮಾತು !

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದ ಪಣೆಕ್ಕರ, ನೆಕ್ಕಿಲು, ಅಲೆಕ್ಕಿ, ಮುಚ್ಚುರು, ಪರಡಾಲ್, ಮುಗೆರೋಡಿ, ಅಂಕರೊಟ್ಟು, ಕೊಳಚ್ಚಾವು, ಕುದುಮರ, ಪುದ್ದೊಟ್ಡು, ಬಸದಿ ಭಾಗದ ಜನತೆ ಹಲವಾರು ವರ್ಷಗಳಿಂದ ನೆಟ್ ವರ್ಕ್ ಸಮಸ್ಯೆಯನ್ನು ಸಹಿಸುತ್ತಲೇ ಬಂದಿದ್ದಾರೆ. ಸರಿಯಾಗಿ ಯಾವುದೇ ಸಿಮ್ ನೆಟ್ ವರ್ಕ್ ಕೂಡಾ ಸಿಗದೇ ಇರುವುದರಿಂದ ಹಲವು ಟೆಲಿಕಾಂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಿದರೂ ಆದರೆ ಯಾವುದೇ ರೀತಿಯ ಸಕಾರತ್ಮಕ ಸ್ಪಂದನೆ ದೊರೆತಿರಲಿಲ್ಲ.

ಸಂಕಷ್ಟದಲ್ಲಿ ಇಂಟರ್ನೆಟ್ ಬಳಕೆದಾರರು:
ಈ ನೆಟ್ವರ್ಕ್ ಸಮಸ್ಯೆಯಲ್ಲಿ ಹೈರಾಣಾಗಿ ಹೋಗಿರುವವರು ಮಾತ್ರ ವಿದ್ಯಾಥಿಗಳು ಮತ್ತು ವರ್ಕ್ ಫ್ರಮ್ ಹೋಂನ ವೃತ್ತಿಪರರು. ಈಗಂತೂ ಕೊರೋನಾ ಲಾಕ್ ಡೌನ್ ಜಾರಿಯಾದ ಮೇಲೆ ಶಾಲಾಮಕ್ಕಳ ಕಲಿಕೆ ಮೊಬೈಲ್ ನಲ್ಲೆ ಆಗಿದೆ. ಹಾಗೆಯೆ ಅನೇಕ ಐಟಿ ಮತ್ತು ವರ್ಕ್ ಫ್ರಮ್ ಹೋಂ ಸೌಕರ್ಯವಿರುವ ಅನೇಕ ವೃತ್ತಿಪರರು ಕಣಿಯೂರು ಗ್ರಾಮದಲ್ಲಿದ್ದಾರೆ. ಆದರೆ ಸರಿಯಾದ ನೆಟ್ವರ್ಕ್ ಇಲ್ಲದೆ ಇಂಟರ್ನೆಟ್ ಸೌಲಭ್ಯ ಬಿಡಿ, ಸರಿಯಾಗಿ ಒಂದು ದೂರವಾಣಿ ಕರೆ ಮಾಡಲು ಹರಸಾಹಸ ಪಡುವಂತಾಗಿದೆ.

ನಿಸ್ತೇಜವಾಗಿರುವ ಬಿಎಸ್‌ಎನ್‌ಎಲ್:
ಕಳೆದ ಹಲವು ವರ್ಷಗಳಿಂದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆ ಈ ಭಾಗದಲ್ಲಿದೆ. ಅಬ್ಬರದ ಗಾಳಿ ಮಳೆಗೆ ವಿದ್ಯುತ್‌ ಕೈಕೊಟ್ರೆ ಮತ್ತೆ ಬರುವುದು ಕನಿಷ್ಠವೆಂದರೂ ಎರಡು ದಿನ ಬಿಟ್ಟು. ವಿದ್ಯುತ್‌ ವ್ರತ್ಯಯ ಪದೇ ಪದೆ ಕಾಡುತ್ತಿರುವ ಇಲ್ಲಿ ಟವರ್‌ಗಳು ಚೈತನ್ಯ ಪಡೆಯದೆ ವರ್ಷಾನುಗಟ್ಟಲೆ ಆಗಿರುವುದರಿಂದ ಈ ಭಾಗದ ಜನರ ನೆಟ್ವರ್ಕ್ ಪರದಾಟ ದೇವರಿಗೆ ಪ್ರೀತಿ ಎಂಬಂತಾಗಿದೆ. ಇನ್ನು ಈ 4G ಯುಗದಲ್ಲಿ ಬಿಎಸ್‌ಎನ್‌ಎಲ್ ಈ ಭಾಗದಲ್ಲಿ ಇನ್ನು ನೀಡುತ್ತಿರುವುದು 2G ವೇಗದ ನೆಟ್ವರ್ಕ್ ವ್ಯವಸ್ಥೆ ಎಂದರೆ ನಾವು ನಂಬಲೇ ಬೇಕು.

ಏರ್ಟೆಲ್-ಜಿಯೋ ಸಮಸ್ಯೆ ಇದರಿಂದ ಹೊರತಾಗಿಲ್ಲ:
2 ಕಿ.ಮೀ ದೂರದಲ್ಲಿ ಏರ್ಟೆಲ್ ಮತ್ತು ಜಿಯೋ ಕಂಪೆನಿಗೆ ಸೇರಿದ ಟವರ್ ಗಳಿವೆ. ಆದರೆ ಈ ಭಾಗದ ಎಲ್ಲಿಯೂ ನೆಟ್‌ವರ್ಕ್ ಸಿಗುತ್ತಿಲ್ಲ. ಇದರ ಬಗ್ಗೆ ಅನೇಕ ಬಾರಿ ಕಸ್ಟಮರ್ ಕೇರ್ ಗೆ ಫೋನ್ ಮಾಡಿ ದೂರು ನೀಡಿದರೆ ಅವರು ಹೇಳುವ ಪರಿಹಾರ ಒಂದೇ “ಸಿಮ್ ತೆಗೆದು ಹಾಕಿ”. ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದ್ದರೂ ಈ ಎರಡು ಕಂಪೆನಿಯ ಸಿಬ್ಬಂದಿಗಳು ಇನ್ನು ಸಿಮ್ ತೆಗೆದು ಹಾಕುವ ಕಾಲದಲ್ಲೇ ಬಾಕಿಯಾಗಿರುವುದು ಈ ಭಾಗದ ಜನರಲ್ಲಿ ನೆಟ್ವರ್ಕ್ ಸಿಗದ ಕೋಪವನ್ನು ದ್ವಿಗುಣ ಮಾಡುವುದಂತು ಸುಳ್ಳಲ್ಲ.

ಶಾಸಕರು ಗಮನ ಹರಿಸುವ ಅಗತ್ಯವಿದೆ :
ತನ್ನ ಕ್ಷೇತ್ರದ ಮಕ್ಕಳ ವಿದ್ಯಾಭಾಸದ ಕಡೆ ಹೆಚ್ಚಿನ ಗಮನ ನೀಡುತ್ತಿರುವ ಈ ಭಾಗದ ಯುವಶಾಸಕ ಹರೀಶ್ ಪೂಂಜಾರವರು ಕಣಿಯೂರು ಗ್ರಾಮ ಮಾತ್ರವಲ್ಲದೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮದಲ್ಲಿ ಜನತೆ ಎದುರಿಸುತ್ತಿರುವ ನೆಟ್ವರ್ಕ್ ಸಮಸ್ಯೆಗೆ ದಣಿಯಾಗಬೇಕೆನ್ನುವುದು ಜನರ ಕಳಕಳಿಯ ಮನವಿಯಾಗಿದೆ.

- Advertisement -
spot_img

Latest News

error: Content is protected !!