Thursday, June 4, 2026
Homeಕರಾವಳಿಮಂಗಳೂರು: ಅಡಿಕೆ ಬೆಳೆ ನೀತಿಗೆ ಖಂಡನೆ: ಕಾಂಗ್ರೆಸ್‌ ಪ್ರತಿಭಟನೆ

ಮಂಗಳೂರು: ಅಡಿಕೆ ಬೆಳೆ ನೀತಿಗೆ ಖಂಡನೆ: ಕಾಂಗ್ರೆಸ್‌ ಪ್ರತಿಭಟನೆ

- Advertisement -
- Advertisement -

ಮಂಗಳೂರು : ಅಡಿಕೆ ಬೆಳೆ ನೀತಿಯನ್ನು ಖಂಡಿಸಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಿಸಾನ್ ಘಟಕದ ನೇತೃತ್ವದಲ್ಲಿ ನಗರದ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ, ಅಡಿಕೆಗೆ ಭವಿಷ್ಯವಿಲ್ಲ, ಅಡಿಕೆ ಬೆಳೆಯನ್ನು ಪ್ರೋತ್ಸಾಹಿಸದಂತೆ  ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಡಿಕೆ ಬೆಳೆಗಾರರ ಹಿತ ಕಾಯಲು ಕ್ಯಾಂಪ್ಕೋ ಸಂಸ್ಥೆಯನ್ನು ಸ್ಥಾಪಿಸಲು ನೆರವು ನೀಡಿತ್ತು. ಅಡಿಕೆ ಆಮದಿಗೆ ನಿರ್ಬಂಧ ವಿಧಿಸಿ ಅಡಿಕೆ ಬೆಳೆಗಾರರ ಹಿತವನ್ನು ಕಾಯ್ದುಕೊಂಡಿತ್ತು. ಆದರೆ ಈಗ ವಿದೇಶಗಳಿಂದ ಮುಕ್ತ ಆಮದಿಗೆ ಅವಕಾಶ ಮಾಡಿಕೊಟ್ಟು ಅಡಿಕೆ ಬೆಳೆಗಾರರಿಗೆ ತೊಂದರೆಯನ್ನುಂಟು ಮಾಡಿದೆ ಎಂದರು.

- Advertisement -

Latest News

error: Content is protected !!