Thursday, June 4, 2026
Homeಕರಾವಳಿವಿಟ್ಲ; ಮೇಯಲು ಬಿಟ್ಟ ಆಡುಗಳನ್ನು ಕದಿಯುತ್ತಿದ್ದಾಗ ಸಿಕ್ಕಿ ಬಿದ್ದ ಖದೀಮರು

ವಿಟ್ಲ; ಮೇಯಲು ಬಿಟ್ಟ ಆಡುಗಳನ್ನು ಕದಿಯುತ್ತಿದ್ದಾಗ ಸಿಕ್ಕಿ ಬಿದ್ದ ಖದೀಮರು

- Advertisement -
- Advertisement -

ವಿಟ್ಲ; ಮೇಯಲು ಬಿಟ್ಟ ಆಡುಗಳನ್ನು ಕದಿಯುತ್ತಿದ್ದಾಗ ಇಬ್ಬರು ಖದೀಮರು ಸಿಕ್ಕಿ ಬಿದ್ದ ಘಟನೆ ವಿಟ್ಲದಲ್ಲಿ ನಡೆದಿದೆ.ಸಾಲೆತ್ತೂರು ನಿವಾಸಿಗಳಾದ ಅಜೀಮ್‌ (19), ಅನಸ್ (19) ಬಂಧಿತರು.

 ಆರೋಪಿಗಳು ಪೆರುವಾಯಿ, ಅಡ್ಯನಡ್ಕ, ಕೇಪು, ಮರಕ್ಕಿಣಿ, ಅಳಿಕೆ ಮುಂತಾದ ಪ್ರದೇಶಗಳಿಂದ ಗುಡ್ಡಕ್ಕೆ ಮೇಯಲೆಂದು ಬಿಡುತ್ತಿದ್ದ ಆಡುಗಳನ್ನು ಕಳ್ಳತನ ಮಾಡುತ್ತಿದ್ದರು. ಮೇಯಲು ಬಿಟ್ಟಿದ್ದ ಆಡುಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವ ಹಿನ್ನಲೆ ಆಡುಗಳ ನಾಪತ್ತೆ ಹಿಂದೆ ಖದೀಮರ ಕೈಚಳಕವನ್ನು ಪತ್ತೆ ಹಚ್ಚುವ ಸಲುವಾಗಿ ಆಡು ಮಾಲೀಕರು ಕಾಯುತ್ತಿದ್ದರು.

ಶುಕ್ರವಾರ ಮುಂಜಾನೆ ಕಳ್ಳರ ಪತ್ತೆಗಾಗಿ ಮಾಲೀಕರು ಕಾಯುತ್ತಿದ್ದ ವೇಳೆ ಕೇಪು ಕಲ್ಲಂಗಳ ದ್ವಾರದ ಸಮೀಪ ಆಡು ಕಳ್ಳರಿಬ್ಬರು ಸಾರ್ವಜನಿಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.ಕೂಡಲೇ ಇಬ್ಬರನ್ನು ಹಿಡಿದುಕೊಂಡು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಠಾಣೆಯಲ್ಲಿ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!