Saturday, June 6, 2026
Homeತಾಜಾ ಸುದ್ದಿಹುಲ್ಲಿನ ಆಸೆಗೆ ಹೋಗಿ ಕಲ್ಲು ಬಂಡೆ ನಡುವೆ ಸಿಲುಕಿದ ಹಸುವಿನ ತಲೆ

ಹುಲ್ಲಿನ ಆಸೆಗೆ ಹೋಗಿ ಕಲ್ಲು ಬಂಡೆ ನಡುವೆ ಸಿಲುಕಿದ ಹಸುವಿನ ತಲೆ

- Advertisement -
- Advertisement -

ಆದಿಲಾಬಾದ್: ಮೇಯಲು ಬಿಟ್ಟಿದ್ದ ಹಸುವೊಂದು ಕಾಡಿಗೆ ಹೋಗಿ ಹುಲ್ಲಿನ ಆಸೆಗೆ ಹೋಗಿ ತಲೆಯನ್ನು ಅಲ್ಲಿದ್ದ ಕಲ್ಲಿನ ಮಧ್ಯ ಇರುವ ಸೀಳಿನಲ್ಲಿ ಸಿಲುಕಿಸಿಕೊಂಡು ಒದ್ದಾಡಿದ ಘಟನೆ ಆದಿಲಾಬಾದ್ ಜಿಲ್ಲೆಯ ಸಿರಿಕೊಂಡ ವಲಯದ ಲಚಿಂಪುರ(ಬಿ) ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ರೈತನೊಬ್ಬ ಹಸುಗಳನ್ನು ಮೇಯಿಸಲು ಅರಣ್ಯಕ್ಕೆ ಹೊಡೆದುಕೊಂಡು ಹೋಗಿದ್ದರು. ಈ ವೇಳೆ ಹಸುವೊಂದು ಕಲ್ಲು ಬಂಡೆಗಳ ಸಂದಿಯಲ್ಲಿರುವ ಮಧುಕಾ ಲಾಂಗಿಫೋಲಿಯಾ ಮೇವು ನೋಡಿ ತಿನ್ನಲು ಹೋಗಿತ್ತು. ಈ ವೇಳೆ ಅದು ಕಲ್ಲುಗಳ ನಡುವಿನ ಸೀಳಿನಲ್ಲಿ ತನ್ನ ತಲೆಯನ್ನು ಸಿಲುಕಿಸಿಕೊಂಡು ಒದ್ದಾಡಿತು.

ಅಲ್ಲಿಂದ ಹೊರಬರಲು ಅದು ತುಂಬಾ ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ಸ್ಥಳಕ್ಕೆ ಬಂದ ಹಸು ಮೇಯಿಸುತ್ತಿದ್ದ ವ್ಯಕ್ತಿ, ಆಕಳು ಕಲ್ಲು ಬಂಡೆ ನಡುವೆ ತಲೆ ಸಿಕ್ಕಿಸಿಕೊಂಡಿದ್ದನ್ನು ನೋಡಿದ್ದಾನೆ. ಬಳಿಕ ಗ್ರಾಮಸ್ಥರ ನೆರವಿನಿಂದ ಹಸುವನ್ನು ಪಾರು ಮಾಡಿದ್ದಾನೆ. ಈ ವಿಡಿಯೋ ಈಗ ವೈರಲ್​ ಆಗಿದೆ

- Advertisement -

Latest News

error: Content is protected !!