Saturday, June 6, 2026
Homeತಾಜಾ ಸುದ್ದಿತನ್ನ ಪ್ರೇಯಸಿಯನ್ನು ಭೇಟಿಯಾಗಲು ಅಡ್ಡಿಯಾಗಬಾರದು ಅಂತಾ ಗ್ರಾಮದಲ್ಲಿ ಪವರ್ ಕಟ್ ಮಾಡುತ್ತಿದ್ದ ಲೈನ್ ಮ್ಯಾನ್

ತನ್ನ ಪ್ರೇಯಸಿಯನ್ನು ಭೇಟಿಯಾಗಲು ಅಡ್ಡಿಯಾಗಬಾರದು ಅಂತಾ ಗ್ರಾಮದಲ್ಲಿ ಪವರ್ ಕಟ್ ಮಾಡುತ್ತಿದ್ದ ಲೈನ್ ಮ್ಯಾನ್

- Advertisement -
- Advertisement -

ಪಾಟ್ನಾ: ತನ್ನ ಪ್ರೇಯಸಿಯನ್ನು ಭೇಟಿಯಾಗಲು ಅಡ್ಡಿಯಾಗಬಾರದು ಅಂತಾ ಗ್ರಾಮದ ಕರೆಂಟ್ ಕಡಿತಗೊಳಿಸಿದ ಲೈನ್ ಮ್ಯಾನ್ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ..

ಪುರ್ನಿಯಾ ಜಿಲ್ಲೆಯ ಗಣೇಶ್‍ಪುರ ಗ್ರಾಮದಲ್ಲಿ ಪದೇ ಪದೇ ಕರೆಂಟ್ ಸಮಸ್ಯೆಯಾಗುತ್ತಿತ್ತು. ಜನರು ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವುದೇ ರೀತಿಯ ಕರೆಂಟ್ ಸಮಸ್ಯೆಯಾಗುತ್ತಿಲ್ಲ. ಆದರೆ ನಮ್ಮ ಹಳ್ಳಿಯಲ್ಲಿ ಮಾತ್ರ ಯಾಕೆ ಈ ರೀತಿಯಾಗುತ್ತಿದೆ ಎಂದು ಯೋಚಿಸುತ್ತಿದ್ದರು. ತಿಂಗಳಲ್ಲಿ ಒಮ್ಮೆಯಾದರೂ ಈ ಸಮಸ್ಯೆ ಕಾಣಿಸಿಕೊಳ್ಳುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿ ಇದಕ್ಕೆ ನಿಖರವಾದ ಕಾರಣ ಹುಡುಕಲು ನಿರ್ಧರಿಸಿದರು.

ಈ ಕುರಿತು ಪರಿಶೀಲಿಸಿದ ನಂತರ, ಎಲೆಕ್ಟ್ರಿಷಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿರುವುದು ಗೊತ್ತಾಗಿದೆ. ಲೈನ್‌ಮ್ಯಾನ್ ನನ್ನು ಹಿಡಿಯಲು ನಿರ್ಧರಿಸಿದ ಗ್ರಾಮಸ್ಥರು ಪ್ಲ್ಯಾನ್ ಒಂದನ್ನು ಮಾಡಿದರು.

ಗ್ರಾಮಸ್ಥರು ಪ್ಲಾನ್ ಮಾಡಿದ ರೀತಿಯಲ್ಲಿಯೇ ಲೈನ್‌ಮ್ಯಾನ್ ಬಂದಿದ್ದು, ಎಲ್ಲರೂ ಕೋಪಗೊಂಡು ಅವನನ್ನು ಥಳಿಸಿದ್ದಾರೆ. ನಂತರ ಅವರು ಲೈನ್‌ಮ್ಯಾನ್ ನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಗ್ರಾಮದ ಮುಖ್ಯಸ್ಥ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತ ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ಮದುವೆ ಮಾಡಿಸಿದ್ದಾರೆ.

- Advertisement -

Latest News

error: Content is protected !!