Friday, April 26, 2024
Homeಕರಾವಳಿಕನ್ನಡದ ಕೊರೋನಾ ಕಾಲರ್ ಟ್ಯೂನ್ ಗೆ ಧ್ವನಿಯಾಗಿದ್ದು ಕರಾವಳಿಯ ಬೆಡಗಿ

ಕನ್ನಡದ ಕೊರೋನಾ ಕಾಲರ್ ಟ್ಯೂನ್ ಗೆ ಧ್ವನಿಯಾಗಿದ್ದು ಕರಾವಳಿಯ ಬೆಡಗಿ

spot_img
- Advertisement -
- Advertisement -

ಮಂಗಳೂರು: ನೋವೆಲ್ ಕೊರೋನಾ ವೈರಸ್ ಹರಡುದನ್ನು ತಡೆಗಟ್ಟಬಹುದಾಗಿದೆ.. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಸ್ಯೂವಿನಿಂದ ನಿಮ್ಮ ಬಾಯಿ ಮುಚ್ಚಿ…ಹೀಗಂತ ಕನ್ನಡಿಗರು ಕಾಲ್ ಮಾಡುವಾಗ ಬರುವ ಕನ್ನಡ ಕಾಲರ್ ಟ್ಯೂನ್ ನಾವು ನೀವೆಲ್ಲ ಕೇಳಿರುತ್ತೀವಿ, ಕೊರೋನಾ ವಕ್ಕರಿಸಿದ ಮೇಲೆ ಕೊರೋನಾಗಿಂತ ಜಾಸ್ತಿ ಕಾಡಿದ್ದು ಇದೇ ಕೊರೋನಾ ವಾಯ್ಸ್..ಹೌದು… ಕೊರೊನಾ… ಕೊರೊನಾ… ಕೊರೊನಾ..

ವಿಶ್ವದೆಲ್ಲೆಡೆ ‌ಅದೇ ಸುದ್ದಿ, ಯಾರೊಂದಿಗಾದರೂ ಕಾಲ್ ಮಾಡಿ ನೆಮ್ಮದಿಯಿಂದ ಮಾತಡೋಣ ಅಂದ್ರೂ, ಮೊದಲು ಬರೋದು ಕೂಡ ಕೊರೋನಾ‌ ತಡೆಗಟ್ಟಿ ಎನ್ನುವ ಕಾಲರ್ ಟ್ಯೂನ್. ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹಬ್ಬುತ್ತಿರುವ ಕೋವಿಡ್ ವೈರಸ್ ನ ಜಾಗ್ರತಿ ಧ್ವನಿಯು ಕಾಲರ್ ಟ್ಯೂನ್ ನ ಮೂಲಕ ಕೋಟ್ಯಂತರ ಜನರ ಕಿವಿಗೆ ತಲುಪುತ್ತಿದೆ. ಈ ಕಾಲರ್ ಟ್ಯೂನ್ ಗೆ ಕನ್ನಡ ಧ್ವನಿ ಕೊಟ್ಟ ಬಹುಮುಖ ಪ್ರತಿಭೆ ಡಾರೆಲ್ ಜೆಸಿಕಾ ಫೆರ್ನಾಂಡಿಸ್.

ಮಂಗಳೂರಿನ ಪಡೀಲ್ ನಿವಾಸಿ ದಿವಂಗತ ವೆಲೇರಿಯನ್ ಫೆರ್ನಾಂಡಿಸ್ ಹಾಗೂ ಲವಿನಾ ಫೆರ್ನಾಂಡಿಸ್ ರವರ ಪುತ್ರಿ. ಪ್ರಸ್ತುತ ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಕಳೆದ 7 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಕಪಿತಾನಿಯೊ ದಲ್ಲಿ ಪಡೆದು ಪದವಿ ಶಿಕ್ಷಣವನ್ನು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿರುತ್ತಾರೆ. ಎಂಪಿಎಡ್ ಪದವಿ ಪಡೆದ ಇವರು ಸ್ವಲ್ಪ ಸಮಯ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ 2013ರಲ್ಲಿ ದೆಹಲಿಯ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇವರು ಪುತ್ತೂರಿನ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ ಇವರ ತಂಗಿಯೂ ಹೌದು.

ಕನ್ನಡದಲ್ಲಿ ಒಟ್ಟು ಮೂರು ಹಂತದಲ್ಲಿ ಜಾಗೃತಿ ಧ್ವನಿ ಬಂದಿದ್ದು,ಅದರಲ್ಲಿ ಮೊದಲನೆಯದ್ದು, ಮಂಗಳೂರಿನ ಪಡೀಲ್ ಮೂಲದ ಡಾಲೇರ್ ಜೆಸಿಂತಾ ಫೆರ್ನಾಂಡೀಸ್ ಅವರದ್ದು. ಎಂಪಿಎಡ್ ಪದವಿ ಪಡೆದ ಇವರು ಸ್ವಲ್ಪ ಸಮಯ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.ನಂತರ 2013ರಲ್ಲಿ ಲ್ಲಿ ಕೆಲಸಕ್ಕೆ ಸೇರಿಕೊಂಡ ಇವರ ಧ್ವನಿಯನ್ನು ಗುರುತಿಸಿದ ಶಾಲಾ ರಾಗಿದ್ದ ವಾಯ್ಸ್ ಓವರ್ ಆರ್ಟಿಸ್ಟ್ ಕೃಷ್ಣ ಭಟ್ ಎಂಬುವವರು.


ಜೆಸಿಕಾರವರಿಗೆ ಕೋವಿಡ್ ಜಾಗೃತಿಯ ಕಾಲರ್ ಟ್ಯೂನ್ ಗೆ ಧ್ವನಿ ಕೊಡಲು ಪ್ರೇರೇಪಿಸಿದವರು ಖ್ಯಾತ ಯಕ್ಷಗಾನ ಕಲಾವಿದರಾದ ಸರವು ಕೃಷ್ಣ ಭಟ್. ಇವರು ಜೆಸಿಕಾ ಕೆಲಸ ಮಾಡುತ್ತಿರುವ ದೆಹಲಿಯ ಶಿಕ್ಷಣ ಸಂಸ್ಥೆಯ ಸಂಚಾಲಕರು ಕೂಡ ಹೌದು. ಜೆಸಿಂತಾ ಫೆರ್ನಾಂಡೀಸ್ ಅವರಿಗೆ ವಾಯ್ಸ್ ಓವರ್ ನೀಡಲು ಅವಕಾಶ ಮಾಡಿಕೊಟ್ಟರು. ನಂತರ ರೆಡಿಯೋ ಹಾಗೂ ಟಿವಿಗಳಲ್ಲಿ ಬರುವ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ್ದರು. ಹೀಗಾಗಿ ಇವರಿಗೆ ಕೊರೋನಾ ಜಾಗೃತಿಯ ಧ್ವನಿ ನೀಡುವ ಅವಕಾಶ ಒದಗಿ ಬಂದಿತ್ತು.. “ನಾನು ಸರವು ಕೃಷ್ಣ ಭಟ್ ಅವರು ಹೇಳಿದರೆ ಮಾತ್ರವೇ ವಾಯ್ಸ್ ಓವರ್ ಕೊಡಲು ಹೋಗುವುದು, ಬೇರೆ ಯಾರು ಕರೆದರೂ ಇದುವರೆಗೂ ಹೋಗಲಿಲ್ಲ “ಎಂದಿದ್ದಾರೆ ಜೆಸಿಕಾ.

ಚಿಕ್ಕವಯಸ್ಸಿನಲ್ಲಿ ಸೇನೆಗೆ ಸೇರುವ ಕನಸು ಹೊತ್ತುಕೊಂಡಿದ್ದ ಇವರು ತಮ್ಮ ಕಾಲೇಜು ದಿನಗಳಲ್ಲಿ NCC ಕೆಡೆಟ್ ಆಗಿ ಸಂತ ಅಲೋಶಿಯಸ್ ಕಾಲೇಜಿನ 2006-07 ನೇ ಸಾಲಿನ “ಬೆಸ್ಟ್ NCC ಕೆಡೆಟ್ “ಎಂಬ ಹೆಸರಿಗೆ ಭಾಜನರಾಗಿದ್ದಾರೆ. NCC ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಯಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಪರೇಡ್ ಟ್ಯಾಲೆಂಟ್ ನಲ್ಲಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ಖೋ ಖೋ, ಕಬಡ್ಡಿ, ಥ್ರೋ ಬಾಲ್, ಟೆನ್ನಿಸ್, ಫುಟ್ಬಾಲ್, ಹ್ಯಾಂಡ್ಬಾಲ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಯಲ್ಲಿ ಭಾಗವಹಿಸಿರುತ್ತಾರೆ.

ಜೆಸಿಕಾರವರು ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು, 2010ರಲ್ಲಿ ರಾಜಸ್ತಾನ ದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. B.P.Ed ನಲ್ಲಿ 2ನೇ ರಾಂಕ್ ಹಾಗೂ M.P.Ed ನಲ್ಲೂ 2ನೇ ರಾಂಕ್ ಪಡೆದು ಸೈ ಎನಿಸಿಕೊಂಡಿದ್ದಾರೆ.

ಜೆಸಿಂತಾ ಫೆರ್ನಾಂಡೀಸ್ ಅವರ ಪತಿ ಡೊರ್ಜೆ ಜೋಷುಆ ಚಂಡಿಗಢದಲ್ಲಿ ಸೈನಿಕರಾಗಿರೋದ್ರಿಂದ ಜೆಸಿಂತಾ ಫೆರ್ನಾಂಡೀಸ್ ಕೂಡ ಸದ್ಯ ಚಂಡಿಗಢದಲ್ಲಿ ಇದ್ದಾರೆ..

- Advertisement -
spot_img

Latest News

error: Content is protected !!