Thursday, June 4, 2026
Homeತಾಜಾ ಸುದ್ದಿಇಂದು ಮಹಾ ಸಿ.ಎಂ ಉದ್ಧವ್ ಠಾಕ್ರೆ ಸೇರಿ 9 ಮಂದಿ ವಿಧಾನ...

ಇಂದು ಮಹಾ ಸಿ.ಎಂ ಉದ್ಧವ್ ಠಾಕ್ರೆ ಸೇರಿ 9 ಮಂದಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ

- Advertisement -
- Advertisement -

ಮುಂಬೈ: ಮೇ 18 . ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪದ ಅಲಂಕರಿಸಿದ ಉದ್ಧವ್ ಠಾಕ್ರೆ ಸೇರಿ ರಾಜ್ಯದ 9 ಮಂದಿ ವಿಧಾನ ಪರಿಷತ್ ಸದಸ್ಯರು ಇಂದು ಮಧ್ಯಾಹ್ನ 1 ಗಂಟೆಗೆ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೇ 14ರಂದು ಒಂಬತ್ತು ಜನ ಅಭ್ಯರ್ಥಿಗಳು ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಖಾಲಿಯಿದ್ದ ಒಂಬತ್ತು ಸ್ಥಾನಗಳಿಗೆ ಕೇವಲ ಒಂಬತ್ತು ಜನರು ಮಾತ್ರವೇ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಮತದಾನದ ಫಲಿತಾಂಶವನ್ನು ಅಂದೇ ಘೋಷಿಸಲಾಯಿತು.
ಶಿವಸೇನೆಯಿಂದ ಠಾಕ್ರೆ ಅವರೊಂದಿಗೆ ನೀಲಂ ಗೋರೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಗೋಪಿಚಂದ್ ಪಡಲ್ಕರ್, ಪ್ರವಿಣ್ ದಾಟ್ಕೆ, ರಂಜೀತ್‌ಸಿನ್ಹ ಮೋಹಿತ್ ಪಾಟೀಲ್ ಮತ್ತ ರಮೇಶ್ ಕಾರಟ್ ಆಯ್ಕೆಯಾಗಿದ್ದಾರೆ.

- Advertisement -

Latest News

error: Content is protected !!