Friday, June 5, 2026
Homeತಾಜಾ ಸುದ್ದಿಮಂಡ್ಯದಲ್ಲಿ ಪೊಲೀಸರ ಮೂಲಕ ಭಗವಾಧ್ವಜ ಕೆಳಗಿಳಿಸಿ ಹಿಂದೂಗಳ ನಂಬಿಕೆಗೆ ಅಪಮಾನ: ವಿಧಾನ ಪರಿಷತ್ ವಿಪಕ್ಷ ನಾಯಕ...

ಮಂಡ್ಯದಲ್ಲಿ ಪೊಲೀಸರ ಮೂಲಕ ಭಗವಾಧ್ವಜ ಕೆಳಗಿಳಿಸಿ ಹಿಂದೂಗಳ ನಂಬಿಕೆಗೆ ಅಪಮಾನ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪ

- Advertisement -
- Advertisement -

ಉಡುಪಿ: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರದಲ್ಲಿ ಹಿಂದೂ ವಿರೋಧಿ ಸಿದ್ಧರಾಮಯ್ಯ ಸರ್ಕಾರ ಮಾಡುತ್ತಿರುವ ಅನಾಹುತ ನೋಡಿದರೆ ಆಶ್ಚರ್ಯ ಆಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪೊಲೀಸರ ಮೂಲಕ ಭಗವಾ ಧ್ವಜ ಕೆಳಗಿಳಿಸಿ ಹಿಂದೂಗಳ ನಂಬಿಕೆಗೆ ಅಪಮಾನ ಮಾಡುವ ಕೆಲಸವನ್ನು ಸಿದ್ಧರಾಮಯ್ಯ ಸರ್ಕಾರ ಮಾಡಿದೆ ಎಂದು ಆರೋಪಿಸಿರುವ ಕೋಟ ಶ್ರೀನಿವಾಸ ಪೂಜಾರಿ, ಇಂತಹ ಘಟನೆಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರಿಗೂ ನೋವುಂಟು ಮಾಡುವ ಘಟನೆ ಎಂದು ಹೇಳಿದ್ದಾರೆ.

ಅಲ್ಲದೇ ಇದು ಸಮಸ್ತ ಹಿಂದೂಗಳಿಗೆ ಸಿದ್ದರಾಮಯ್ಯ ಸರ್ಕಾರ ಒಡ್ಡಿರುವ ಸವಾಲು ಎಂದೂ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇನ್ನು ಬಿಜೆಪಿ ಪ್ರತಿಭಟನೆ ಮಾಡುವ ಮೂಲಕ ಹಿಂದೂಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದೂ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

- Advertisement -

Latest News

error: Content is protected !!