Saturday, August 29, 2026
Homeಕರಾವಳಿಬೆಳ್ತಂಗಡಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ, ಮೂವರು ಸಾವು

ಬೆಳ್ತಂಗಡಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ, ಮೂವರು ಸಾವು

- Advertisement -
- Advertisement -

ಬೆಳ್ತಂಗಡಿ: ಪಟಾಕಿ‌ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ವೇಣೂರು ಸಮೀಪ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆ ನಡೆದಿರುವ ಸ್ಥಳ ಬಶೀರ್ ಎಂಬವರಿಗೆ ಸೇರಿದ್ದಾಗಿದೆ.

ಸಾಲಿಡ್ ಫೈರ್ ವರ್ಕ್ಸ್ ಎಂಬ ಹೆಸರಿನ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು, ಕೇರಳ ಮೂಲದ ಸ್ವಾಮಿ(55) ವರ್ಗೀಸ್(68) ಮತ್ತು ಹಾಸನ ಜಿಲ್ಲೆಯ ಅರಸೀಕರೆ ಮೂಲದ ಚೇತನ್(25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಗೋದಾಮಿನಲ್ಲಿ ಒಂಬತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಸ್ಫೋಟದ ತೀವ್ರತೆಗೆ‌ ಓರ್ವ ಕಾರ್ಮಿಕ ಹೊರಗೆ ಹಾರಿ ಬಿದ್ದಿದ್ದು, ಪಕ್ಕದ ತೋಟಕ್ಕೂ ಬೆಂಕಿ ತಗುಲಿದೆ.

ಘಟನಾ
ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ವೇಣೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!