Thursday, June 4, 2026
Homeಅಪರಾಧಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

- Advertisement -
- Advertisement -

ಉಳ್ಳಾಲ: ತೊಕ್ಕೊಟ್ಟು ಸಮೀಪದ ಕಲ್ಲಾಪು ಪಾರ್ದೆ ಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮೂಲತಃ ನರಿಂಗಾನ ಗ್ರಾಮದ ಮೊಂಟೆಪದವಿನ ಮಠ ನಿವಾಸಿ ನಂದಕುಮಾರ್ (38) ನಂದಕುಮಾರ್ ಅವರು ಸಮಾರಂಭಗಳಿಗೆ ಲೈಟಿಂಗ್, ಮೈಕ್ ಅಳವಡಿಸುವ ವೃತ್ತಿ ನಡೆಸುತ್ತಿದ್ದು, ಕಲ್ಲಾಪು ಪಾರ್ದೆಕಟ್ಟೆಯ ಡೆನ್ನಿಸ್ ಡಿ’ಸೋಜಾ ಅವರ ಮನೆಯ ಮಹಡಿಯ ಕೋಣೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮನೆಯ ಮಾಲಿಕ ಡೆನ್ನಿಸ್ ಶುಕ್ರವಾರ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಬಂದಿದ್ದ ಸಂದರ್ಭದಲ್ಲಿ ಮಧ್ಯಾಹ್ನ ಮನೆಗೆ ಭೇಟಿ ನೀಡಿದ್ದು, ಮಹಡಿಯ ಬಾಗಿಲು ತೆರೆದು ನೋಡಿದಾಗ ನಂದ ಕುಮಾರ್ ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

ಘಟನೆಯ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!