Thursday, April 25, 2024
Homeತಾಜಾ ಸುದ್ದಿಗುಣಮುಖರಾದವರಲ್ಲೂ ಮತ್ತೆ ಕಾಣಿಸಿ‌ಕೊಳ್ತಿದೆ ಕಿಲ್ಲರ್ ಕೊರೊನಾ

ಗುಣಮುಖರಾದವರಲ್ಲೂ ಮತ್ತೆ ಕಾಣಿಸಿ‌ಕೊಳ್ತಿದೆ ಕಿಲ್ಲರ್ ಕೊರೊನಾ

spot_img
- Advertisement -
- Advertisement -

ಬೆಂಗಳೂರು; ಅಯ್ಯೋ! ಕೊರೊನಾ ಅಂದ್ರೆ‌ ಇಷ್ಟೇನಾ? ನಮಗೆ ಒಮ್ಮೆ ಕೊರೊನಾ ಬಂದಿದೆ ಇನ್ನು ನಮ್ಮನ್ನು ಟಚ್ ಕೂಡ ಮಾಡಲ್ಲ ಅಂತಾ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಕೋವಿಡ್ ಭರ್ಜರಿಯಾಗಿ‌ ಶಾಕ್ ಕೊಡ್ತಿದೆ.

ಯೆಸ್…..ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದವರಲ್ಲೂ ಮತ್ತೆ ಕೊರೊನಾ ಕಾಣ್ಸಿಕೊಳ್ತಿರೋದು ಆತಂಕ ಮೂಡಿಸಿದೆ. ತಿಂಗಳ ಹಿಂದೆ 10 ಸಾವಿರದ ಗಡಿ ದಾಟುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ 3 ಸಾವಿರಕ್ಕೆ ಬಂದು ನಿಂತಿದೆ. ಆದರೆ ಕೊರೊನಾ ಬಂದು ಗುಣಮುಖ ಆದವರಲ್ಲಿಯೂ ಈಗ ಸೋಂಕು ಹೆಚ್ಚಾಗಿದೆ. ಹೀಗಾಗಿ ಒಮ್ಮೆ ಬಂದು ರಿಕವರಿ ಅದವರಿಗೂ ಕೊರೊನಾ ಮತ್ತೆ ಕಾಟ ಕೊಡುತ್ತಿದೆ ಎಂಬ ವಿಚಾರವೊಂದು ಬಯಲಾಗಿದೆ.

ರಾಜ್ಯದಲ್ಲಿ ಒಮ್ಮೆ ಸೋಂಕು ಕಾಣಿಸಿಕೊಂಡವರಲ್ಲಿ ಶೇ.5 ರಷ್ಟು ಮಂದಿಯಲ್ಲಿ ಮತ್ತೆ ಸೋಂಕು ಕಾಣಿಸ್ತಿದೆ. ಕೊರೊನಾದಿಂದ ಹುಷಾರಾಗಿದ್ರೂ ಮತ್ತೆ ಕೊರೊನಾ ಬರುವವರ ಸಂಖ್ಯೆ ಶೇ.5ರಷ್ಟು ಆಗಿರೋದು ಆಘಾತಕಾರಿ ವಿಷಯವಾಗಿದೆ. ಈ ಆಘಾತಕಾರಿ ಅಂಶವನ್ನ ತಜ್ಞರು ಆರೋಗ್ಯ ಸಚಿವರಿಗೆ ತಿಳಿಸಿದ್ದಾರೆ. ಮೊದಲ ಬಾರಿಗೆ ಸೋಂಕಿನ ಲಕ್ಷಣವಿಲ್ಲದೇ ಇದ್ದವರಿಗೆ ಎರಡನೇ ಬಾರಿಗೆ ಸೋಂಕು ಬಂದರೆ ಹೆಚ್ಚು ತೊಂದ್ರೆ ಆಗೋದು ಪಕ್ಕಾ ಆಗಿದೆ.

ಹಾಗಾಗಿ ಕೊರೊನಾ ಬರೋದಕ್ಕು ಮುನ್ನ ಹಾಗೇ ಬಂದ ಮೇಲೂ ಎಚ್ಚರವಾಗಿರೋದು ಉತ್ತಮ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅರಿವು ಮೂಡಿಸೋ ಕೆಲಸ ಮಾಡುತ್ತಿದೆ.

- Advertisement -
spot_img

Latest News

error: Content is protected !!