Saturday, June 6, 2026
Homeತಾಜಾ ಸುದ್ದಿಮಸೀದಿಗಳಲ್ಲಿನ ಧ್ವನಿವರ್ಧಕದಿಂದ ತೊಂದರೆಯಾದರೆ ಕೂಡಲೇ ತೆರವುಗೊಳಿಸಿ- ಪೊಲೀಸ್ ಇಲಾಖೆಯಿಂದ ಮಹತ್ವದ ಆದೇಶ!..

ಮಸೀದಿಗಳಲ್ಲಿನ ಧ್ವನಿವರ್ಧಕದಿಂದ ತೊಂದರೆಯಾದರೆ ಕೂಡಲೇ ತೆರವುಗೊಳಿಸಿ- ಪೊಲೀಸ್ ಇಲಾಖೆಯಿಂದ ಮಹತ್ವದ ಆದೇಶ!..

- Advertisement -
- Advertisement -

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕ ಅಳವಡಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಡಿಜಿಪಿಗೆ ಬೆಂಗಳೂರಿನ ವಕೀಲ ಹರ್ಷ ಮುತಾಲಿಕ್ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿಜಿಪಿ ಕಚೇರಿ ರಾಜ್ಯದ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಹೆಚ್ಚು ಶಬ್ಧದಿಂದ ಜನರಿಗೆ ತೊಂದರೆ ಉಂಟಾಗಿದ್ದರೆ, ಪರಿಶೀಲಿಸಿ ನಿಮಾನುಸಾರು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಈ ವಿಷಯದಲ್ಲಿ ಮಾಹಿತಿ ಪಡೆದು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಜಿಪಿ ಪರವಾಗಿ ಎಐಜಿಪಿ ಸುತ್ತೋಲೆ ಹೊರಡಿಸಿದ್ದಾರೆ. ಸಧ್ಯ ರಾಜ್ಯಾದ್ಯಂತ ಈ ಹೊಸ ನಿಯಮಾವಳಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

- Advertisement -

Latest News

error: Content is protected !!