Friday, May 3, 2024
Homeತಾಜಾ ಸುದ್ದಿ60 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಗೆ ಮಗು ಜನನ

60 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಗೆ ಮಗು ಜನನ

spot_img
- Advertisement -
- Advertisement -

ನವದೆಹಲಿ: 60 ವರ್ಷದ ವೃದ್ಧನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯೊಬ್ಬಳು ವೃದ್ಧನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು ಇದೀಗ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.

ಬಾಲಕಿ ಮನೆಯ ಟೆರೆಸ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಗುವನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ ಸಿಸಿ ಟಿವಿ ಪರಿಶೀಲಿಸಿದ ಪೊಲೀಸರು ಮಗುವಿನ ತಾಯಿಯ ಮಾಹಿತಿ ಸಂಗ್ರಹಿಸಿದ್ದಾರೆ. ಕೂಡಲೇ ಮಗುವನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

9 ತಿಂಗಳ ಹಿಂದೆ 60 ವರ್ಷದ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರವೆಸೆಗಿದ್ದ. ಇದರ ಫಲವಾಗಿ ಈ ಮಗು ಜನಿಸಿದೆ ಎನ್ನಲಾಗಿದೆ. ಭಯದಿಂದ ಸಂತ್ರಸ್ತೆ ತಾಯಿಗೂ ಈ ಮಾಹಿತಿ ನೀಡಿಲ್ಲ ಎಂದು ಬಾಲಕಿ ಹೇಳಿದ್ದಾಳೆ.

- Advertisement -
spot_img

Latest News

error: Content is protected !!