Saturday, June 6, 2026
Homeತಾಜಾ ಸುದ್ದಿಅರ್ನಬ್ ಬಂಧನ ಕಾನೂನು ಬಾಹಿರ ಎಂದ ಕೋರ್ಟ್!.. ಇಂದು ಜಾಮೀನು ಅರ್ಜಿಯ ವಿಚಾರಣೆ

ಅರ್ನಬ್ ಬಂಧನ ಕಾನೂನು ಬಾಹಿರ ಎಂದ ಕೋರ್ಟ್!.. ಇಂದು ಜಾಮೀನು ಅರ್ಜಿಯ ವಿಚಾರಣೆ

- Advertisement -
- Advertisement -

ಮುಂಬೈ: ಎರಡುದಿನಗಳ ಹಿಂದೆ ಬಂಧಿತರಾಗಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈನ ಆಲಿಬಾಗ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು ಆದರೆ ತನ್ನ ಬಂಧನ ಸರಿಯಲ್ಲ ಎಂದು ಅರ್ನಬ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಅವರನ್ನು ಎರಡು ವರ್ಷ ಹಳೆಯ ಆತ್ಮಹತ್ಯಾ ಪ್ರಚೋದನೆ ಪ್ರಕರಣ ಆರೋಪದಡಿ ಬಂಧಿಸಲಾಗಿತ್ತು.

ಪ್ರಕರಣದ ಬಗ್ಗೆ ಕೋರ್ಟ್ “ಅಕ್ಟೋಬರ್ 15ರಂದು ಮರು ತನಿಖೆಯ ಕುರಿತಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆಯಾದರೂ 2020ರ ಮೇನಲ್ಲಿ ಪ್ರಕರಣದ ತನಿಖೆ ಪುನರಾರಂಭ ಮಾಡಲು ಪೊಲೀಸ್ ಇಲಾಖೆ ನ್ಯಾಯಾಲಯದಲ್ಲಿ ಅನುಮತಿ ಪಡೆದಿಲ್ಲ. ಮೇಲ್ನೋಟಕ್ಕೆ ಅರ್ನಬ್ ಬಂಧನ ಕಾನೂನು ಬಾಹಿರವಾಗಿ ಕಾಣುತ್ತಿದೆ’ ಎಂದು ಅಭಿಪ್ರಾಯ ಪಟ್ಟಿದೆ. ಅರ್ನಬ್ ಜಾಮೀನು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

- Advertisement -

Latest News

error: Content is protected !!