Friday, April 26, 2024
Homeಕರಾವಳಿಕೇರಳ ಕೊಡಗು ಗಡಿ ಪ್ರದೇಶದಲ್ಲಿ ತಪಾಸಣೆ ತೀವ್ರ

ಕೇರಳ ಕೊಡಗು ಗಡಿ ಪ್ರದೇಶದಲ್ಲಿ ತಪಾಸಣೆ ತೀವ್ರ

spot_img
- Advertisement -
- Advertisement -

ಸುಳ್ಯ: ವಿದೇಶದಿಂದ ತಾಲೂಕಿಗೆ ಈ ತನಕ 102 ಮಂದಿ ಮರಳಿದ್ದು, ಅವರ ಮಾಹಿತಿ ಸಂಗ್ರಹಿಸಿ ಎಲ್ಲರಿಗೂ 14 ದಿನಗಳ ಕಾಲ ಮನೆ ಬಿಟ್ಟು ತೆರಳದಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಇವರ ಪೈಕಿ ಯಾರಿಗೂ ಕೋವಿಡ್‌ 19 ಲಕ್ಷಣಗಳು ಕಂಡು ಬಂದಿಲ್ಲ ಎಂದು ಇಲಾಖೆ ತಿಳಿಸಿದೆ. ತಾಲೂಕಿನ ವಿವಿಧ ಗ್ರಾಮಗಳಿಂದ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿರುವವರು ಕೋವಿಡ್‌ 19 ಹಿನ್ನೆಲೆಯಲ್ಲಿ ತವರಿಗೆ ಆಗಮಿಸಿದ್ದಾರೆ. ಅಂತಹವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದ್ದು, 14 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗಡಿ ಪ್ರದೇಶದಲ್ಲಿ ಹೈ ಅಲರ್ಟ್‌
ಕೊಡಗಿನಲ್ಲಿ ಕೋವಿಡ್‌ 19 ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಗಡಿಭಾಗ ಕಲ್ಲುಗುಂಡಿ ಮತ್ತು ಕೇರಳದಿಂದ ಸುಳ್ಯ ಪ್ರವೇಶಿಸುವ ಜಾಲೂÕರು ಬಳಿ ಆರೋಗ್ಯ, ಕಂದಾಯ, ಪೊಲೀಸ್‌ ಇಲಾಖೆ ಶುಕ್ರವಾರ ಜತೆಯಾಗಿ ತಪಾಸಣೆ ಆರಂಭಿಸಿದೆ. ಬೆಳಗ್ಗೆಯಿಂದ ರಾತ್ರಿ 10ರ ತನಕ ಪ್ರತಿ ವಾಹನದಲ್ಲಿ ಪ್ರಯಾಣಿಸುವ ವಾಹನ ಸವಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರ ದೂರವಾಣಿ ಸಂಖ್ಯೆ ಪಡೆದುಕೊಳ್ಳಲಾಗುತ್ತಿದೆ. ಕೋವಿಡ್‌ 19 ಜಾಗೃತಿಯ ಕರಪತ್ರ ನೀಡಲಾಗುತ್ತಿದೆ. ವಿದೇಶದಿಂದ ಬಂದವರಾಗಿದ್ದರೆ ಅವರ ಆರೋಗ್ಯ ಬಗ್ಗೆ ವಿಚಾರಿಸಿ ತಪಾಸಣೆಗೆ ಸೂಚಿಸಲಾಗುತ್ತಿದೆ. ಮಾ.31ರ ವರೆಗೆ ತಪಾಸಣೆ ಮುಂದುವರಿಯಲಿದೆ ಎಂದು ತಾಲೂಕು ಆರೋಗ್ಯ ಇಲಾಖಾಧಿಕಾರಿ ಡಾಣ ಎಂ.ಆರ್‌.ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

ತಪಾಸಣೆ ಸಂದರ್ಭದಲ್ಲಿ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ. ಯತೀಶ್‌ ಉಳ್ಳಾಲ್‌, ತಹಶಿಲ್ದಾರ್‌ ಅನಂತ ಶಂಕರ, ಆರೋಗ್ಯಧಿಕಾರಿ ಡಾಣ ಸುಬ್ರಹ್ಮಣ್ಯ, ಎಸ್‌.ಐ.ಹರೀಶ್‌ ಮೊದಲಾದವರಿದ್ದರು.

- Advertisement -
spot_img

Latest News

error: Content is protected !!