Wednesday, April 24, 2024
Homeಕರಾವಳಿಕಾಸರಗೋಡಿನಲ್ಲಿ ಹೈಅಲರ್ಟ್: 6 ಮಂದಿಗೆ ಕೊರೊನಾ ವೈರಸ್…!!!

ಕಾಸರಗೋಡಿನಲ್ಲಿ ಹೈಅಲರ್ಟ್: 6 ಮಂದಿಗೆ ಕೊರೊನಾ ವೈರಸ್…!!!

spot_img
- Advertisement -
- Advertisement -

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಂದು 6 ಮಂದಿಗೆ COVID- 19 ಖಚಿತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಯಂತ್ರಣಗಳನ್ನು ಹೇರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದೆ. ಆದೇಶಗಳನ್ನು ಉಲ್ಲಂಘಿಸುವವರಿಗೆ 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2(1)ಯ ಪ್ರಕಾರ ಕಠಿಣ ಕ್ರಮಕೈಗೊಳ್ಳಲು ಕಾಸರಗೋಡು ಜಿಲ್ಲಾಧಿಕಾರಿಗೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಪೂರ್ಣ ಅಧಿಕಾರ ನೀಡಲಾಗಿದೆ.
ಜಿಲ್ಲೆಯ ಎಲ್ಲಾ ಸರಕಾರಿ ಕಛೇರಿಗಳೂ, ಇನ್ನಿತರ ಸಾರ್ವಜನಿಕ, ಖಾಸಗೀ ಕಛೇರಿಗಳೂ 1 ವಾರಗಳ ಕಾಲ ಮುಚ್ಚಲಾಗುವುದು. ಅಂಗಡಿ, ಹೊಟೇಲುಗಳು ಬೆಳಿಗ್ಗೆ 11ರಿಂದ ಸಾಯಂಕಾಲ 5 ಗಂಟೆ ತನಕ ಮಾತ್ರ ತೆರೆಯಲಿದೆ.(ಅಗತ್ಯ ಸೇವೆಗಳನ್ನು ಹೊರತುಪಡಿಸಲಾಗಿದೆ.)
ಎರಡು ವಾರಗಳ ಕಾಲ ಎಲ್ಲಾ ಆರಾಧನಾಲಯಗಳನ್ನು ಮುಚ್ಚಬೇಕು.
ಎಲ್ಲಾ ಕ್ಲಬ್ ಗಳು, ಸಿನೇಮಾ ಥಿಯೇಟರ್ ಗಳು 2 ವಾರಗಳ ಕಾಲ ಕಾರ್ಯಾಚರಿಸಬಾರದು.
ಪಾರ್ಕು, ಬೀಚ್ ಮುಂತಾದೆಡೆಗಳಲ್ಲಿ ಜನರ ಗುಂಪು ಸೇರಬಾರದು.
ಸರಕಾರಿ ಕಛೇರಿಗಳು ಮುಚ್ಚಿದರೂ ಸರಕಾರಿ ನೌಕರರು ಜಿಲ್ಲೆ ಬಿಟ್ಟು ಹೊರಹೋಗುವಂತಿಲ್ಲ.
ಜಿಲ್ಲಾಧಿಕಾರಿಗಳು ನಿರ್ದೇಶಿಸುವಾಗ ಸರಕಾರಿ ಕಛೇರಿಗೆ ತೆರಳಲು ಸರಕಾರಿ ನೌಕರರು ಸನ್ನದ್ದರಾಗಿರಬೇಕು. ಮೇಲ್ಕಾಣಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸುವವರಿಗೆ IPC Act 188 ಸೆಕ್ಷನ್ ಪ್ರಕಾರ ಕಾನೂನು ಕ್ರಮಕೈಗೊಳ್ಳಲಾಗುವುದು.
ಇಂದು ಮಧ್ಯರಾತ್ರಿ 12 ಗಂಟೆ ನಂತರ ಈ ಆದೇಶ ಜಾರಿಗೆ ಬರಲಿವೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪ್ರಕಟಿಸಿದ್ದಾರೆ.

ಇನ್ನು ಕೊರೋನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21ರ ಮಧ್ಯಾಹ್ನ‌‌ 2ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ಕೇರಳದ ಗಡಿಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಈ ಮಧ್ಯೆ ತುರ್ತು ‌ಸಂದರ್ಭ ತಲಪಾಡಿ ಚೆಕ್‌ಪೋಸ್ಟ್ ಮೂಲಕ‌ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

- Advertisement -
spot_img

Latest News

error: Content is protected !!