Friday, June 5, 2026
Homeತಾಜಾ ಸುದ್ದಿಹೀಗೊಂದು ಅಚ್ಚರಿಯ ಘಟನೆ : 22 ವರ್ಷಗಳ ನಂತ್ರ ತಾಯಿ -ಮಗನನ್ನು ಒಂದಾಗಿಸಿದ ಕೊರೋನಾ

ಹೀಗೊಂದು ಅಚ್ಚರಿಯ ಘಟನೆ : 22 ವರ್ಷಗಳ ನಂತ್ರ ತಾಯಿ -ಮಗನನ್ನು ಒಂದಾಗಿಸಿದ ಕೊರೋನಾ

- Advertisement -
- Advertisement -

ಹಾಸನ: ಕೊರೊನಾ ಸಾವು ನೋವುಗಳಿಗೆ ಕಾರಣವಾಗುತ್ತಿರೋದು ಮಾತ್ರವಲ್ಲದೇ ಮಾನವೀಯ ಸಂಬಂದಗಳನ್ನೇ ದೂರ ಮಾಡುತ್ತಿದೆ. ಹೀಗಿರುವಾಗ ಹಾಸನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 22 ವರ್ಷಗಳಿಂದ ದೂರವಾಗಿದ್ದ ತಾಯಿ ಮಗನನ್ನು  ಕೊರೊನಾ ಮಾಹಾಮಾರಿಯೇ ಒಂದು ಮಾಡಿದ ಘಟನೆ ನಡೆದಿದೆ.

ಹೌದು… 22 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ಮರಳಿದ್ದಾನೆ. ಹಾಸನ ತಾಲ್ಲೂಕಿನ ಹೊಂಗೆರೆ ಗ್ರಾಮದ ಶೇಖರ್ 22 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿನ್ನೆ ಹೊಂಗೆರೆ ಗ್ರಾಮದ ಮನೆಗೆ ವಾಪಸಾಗಿದ್ದಾರೆ. ಮಗನನ್ನು ಕಂಡು ರಾಜೇಗೌಡ, ಅಕ್ಕಯಮ್ಮ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಎಲ್ಲರೂ ಕೊರೊನಾಗೆ ಹಿಡಿ ಶಾಪ ಹಾಕುತ್ತಿದ್ರೆ ಈ ಕುಟುಂಬದವರು ಮನಸ್ಸಿನಲ್ಲೇ ಕೊರೊನಾಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ.

- Advertisement -

Latest News

error: Content is protected !!