Thursday, June 4, 2026
Homeಕರಾವಳಿಪಂಪ್ ವೆಲ್ ಮೇಲ್ಸೆತುವೆಯ ಗೋಡೆಯ ಮೇಲೆ ಅವಹೇಳನಕಾರಿ ಬರಹ : ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ ಮಂಗಳೂರು...

ಪಂಪ್ ವೆಲ್ ಮೇಲ್ಸೆತುವೆಯ ಗೋಡೆಯ ಮೇಲೆ ಅವಹೇಳನಕಾರಿ ಬರಹ : ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು

- Advertisement -
- Advertisement -

ಮಂಗಳೂರು: ಮಂಗಳೂರಿನ ಪಂಪ್ ವೆಲ್ ಮೇಲ್ಸೆತುವೆಯ ಗೋಡೆಯ ಮೇಲೆ ಅವಹೇಳನಕಾರಿ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರು ಎಪ್ರಿಲ್ 20ರಂದು ಕರ್ನಾಟಕ ಬ್ಯಾಂಕ್ ಹೆಡ್ ಆಫೀಸ್ ಮುಂಭಾಗದಲ್ಲಿರುವ ಪಂಪವೆಲ್ ಫ್ಲೈ ಓವರ್ ಗೋಡೆ ಮೇಲೆ ಅವಹೇಳನಕಾರಿ ಪದ ಹಾಗೂ ಲಾಕ್ ಡೌನ್ ಬೇಕಾಗಿದೆ ಎನ್ನುವ ಬರಹವನ್ನು ಕೆಂಪು ಬಣ್ಣದಲ್ಲಿ ದೊಡ್ಡದಾಗಿ ಬರೆದಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿ ಆಧರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇಬ್ಬರು ಕೂಡಾ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಲಾಕ್‌ಡೌನ್‌ ಆದರೆ ತಮ್ಮ ಪರೀಕ್ಷೆ ಮುಂದೂಡಿಕೆ ಆಗುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!