ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಕೈದಿಗಳ ನಡುವೆ ಹೊಡೆದಾಟ ಆದ ಬಗ್ಗೆ ನೀವು ಮಹಾ ಎಕ್ಪ್ರೆಸ್ ನಲ್ಲಿ ವರದಿ ನೋಡಿರುತ್ತೀರಿ. ಆದ್ರೆ ಕೈದಿಗಳು ಹೊಡೆದಾಟದಲ್ಲಿ ಯಾವ ಮಾರಕ ಆಯುಧಗಳನ್ನು ಬಳಸಿದ್ದರು ಅಂತಾ ಗೊತ್ತಾದ್ರೆ ನೀವು ಒಂದು ಕ್ಷಣ ಶಾಕ್ ಆಗೋದು ಪಕ್ಕಾ.
ಹೌದು… ಈ ಆರೋಪಿಗಳು ಜೈಲಿನಲ್ಲಿ ಹೊಡೆದಾಟಕ್ಕೆ ಕ್ಯಾರಂ ಬೋರ್ಡ್‌ನ ಫ್ರೇಂ ಅನ್ನು ತುಂಡು ಮಾಡಿ ಅದನ್ನು ಹರಿತವಾದ ಚೂರಿಯಾಗಿಸಿಕೊಂಡಿದ್ದಾರೆ ಮತ್ತು ಟ್ಯೂಬ್‌ಲೈಟ್‌ನ್ನು ತುಂಡು ಮಾಡಿ ಅದರ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಶಸ್ತ್ರಾಸ್ತ್ರವನ್ನಾಗಿಯೂ ಈ ಕೈದಿಗಳು ಉಪಯೋಗಿಸಿದ್ದರು ಎಂಬ ಮಾಹಿತಿ ಪೊಲೀಸ್ ಅಧಿಕಾರಿಗಳಿಗೆ ತಲೆನೋವು ತಂದಿದೆ.
ಪ್ರಕರಣದ ನಂತರ 20 ಮಂದಿ ಯನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಜೈಲಿನಲ್ಲಿ ಸಹಚರರು ಹಾಗೂ ಜೈಲು ಸಿಬ್ಬಂದಿ ಮೇಲಿನ ಹಲ್ಲೆಗೆ ಸಂಬಂಧಿಸಿ ಐದು ಪ್ರಕರಣಗಳು ದಾಖಲಾಗಿದೆ ಎಂದು ಜೈಲ್ ಸುಪರಿಂಟೆಂಡ್ ಮಾಹಿತಿ ನೀಡಿದ್ದಾರೆ. ಪ್ರಕರಣದ ಓರ್ವ ಆರೋಪಿ ಸಮೀರ್ ಎಂಬಾತನ ಮೇಲೆ 10ಕ್ಕೂ ಅಧಿಕ ಪ್ರಕರಣಗಳಿದ್ದು, ಅನ್ಸಾರ್ ಮೇಲೂ ಹಲವು ಪ್ರಕರಣಗಳಿವೆ.


