Thursday, June 25, 2026
Homeತಾಜಾ ಸುದ್ದಿರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 3,000 ಕೋವಿಡ್ -19 ಸೋಂಕಿತರು 'ಕಾಣೆ' : ಸಚಿವ...

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 3,000 ಕೋವಿಡ್ -19 ಸೋಂಕಿತರು ‘ಕಾಣೆ’ : ಸಚಿವ ಆರ್‌.ಅಶೋಕ್‌ ಅವರಿಂದ ಸ್ಫೋಟಕ ಮಾಹಿತಿ

- Advertisement -
- Advertisement -

ಬೆಂಗಳೂರು: 3,000 ಕೋವಿಡ್ -19 ಸೋಂಕಿತರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಕಾಣೆಯಾಗಿದ್ದಾರೆ’ ಅನ್ನೋ ಸ್ಪೋಟಕ ಮಾಹಿತಿಯನ್ನು ಸಚಿವ ಆರ್‌. ಅಶೋಕ್‌ ಬಿಚ್ಚಿಟ್ಟಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಬುಧವಾರ ಹೆಚ್ಚಿನ ಸೋಂಕಿತ ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಬೆಂಗಳೂರಿನಿಂದ ‘ಕಾಣೆಯಾದ’ ಸುಮಾರು 3 ಸಾವಿರ ಜನರು ಈ ರೋಗವನ್ನು ಹರಡುತ್ತಿದ್ದಾರೆ ಅವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಾನು ರಾಜ್ಯದ ಜನತೆ ಬಳಿ ವಿನಂತಿ ಮಾಡುತ್ತಿದ್ದು, ಪಾಸಿಟಿವ್‌ ಅಂತ ನಿಮಗೆ ಸಂದೇಶ ಬರಲಿದೆ, ಈ ನಡುವೆ ಕೆಲವು ಮಂದಿ ಶೇ 30 ಮಂದಿ ತಮ್ಮ ಮೊಬೈಲ್‌ ಅನ್ನು ಸ್ವಿಚ್‌ ಆಫ್‌ ಮಾಡಿಕೊಂಡು ತಮ್ಮ ಮನೆಯನ್ನು ಬಿಟ್ಟು ಹೋಗುತ್ತಿದ್ದಾರೆ, ತಮ್ಮ ಆರೋಗ್ಯದಲ್ಲಿ ಏರುಪೇರು ಆದ ಕೂಡಲೇ ತಲೆ ಮರೆಸಿಕೊಳ್ಳುತ್ತಿದ್ದು, ಹೀಗೆ ಮಾಡಬೇಡಿ, ದಯವಿಟ್ಟು ಸಂದೇಶ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಅಂಥ ಮನವಿ ಮಾಡಿಕೊಂಡರು. ಇದೇ ವೇಳೆ ಅವರು ಸೊಂಕಿತರ ಮನೆಯನ್ನು ಈ ಬಾರಿ ಬೇರೆ ರೀತಿಯಲ್ಲಿ ಮಾರ್ಕ್‌ ಮಾಡಲಾಗುವುದು ಅಂತ ಹೇಳಿದರು.

- Advertisement -

Latest News

error: Content is protected !!