Wednesday, April 24, 2024
Homeತಾಜಾ ಸುದ್ದಿಈ ಬಾರಿಯ ಬಿಗ್ ಬಾಸ್ ವಿನ್ನರ್ ವೈಷ್ಣವಿನಾ?

ಈ ಬಾರಿಯ ಬಿಗ್ ಬಾಸ್ ವಿನ್ನರ್ ವೈಷ್ಣವಿನಾ?

spot_img
- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ರಾಜೀವ್ ಹೊರ ಬಿದ್ದಿದ್ದೇ ಬಿಗ್ ಬಾಸ್ ಅಭಿಮಾನಿಗಳು ನಮ್ ಲೆಕ್ಕಾಚಾರ ಉಲ್ಟಾ ಆಯ್ತಲ್ಲಾ ಗುರು ಅಂತಾ ತಲೆ ಚಚ್ಚಿಕೊಳ್ತಿದ್ದಾರೆ. ಇನ್ನು ಕೆಲವರು ಇದೆಲ್ಲಾ ಫೇಕ್ ಗುರು ಸುಮ್ ಸುಮ್ನೆ ಬೇಕೂ ಅಂತಾನೇ ಕೆಲವರನ್ನ ಎಲಿಮಿನೇಟ್ ಮಾಡ್ತಿದ್ದಾರೆ ಅಂತಾ ಬಿಗ್ ಬಾಸ್ ಮೇಲೇನೇ ಗೂಬೆ ಕೂರಿಸ್ತಿದ್ದಾರೆ. ಆದ್ರೆ ಇದೆಲ್ಲದರ ಮಧ್ಯೆ ಇದೀಗ ಬಿಗ್ ಬಾಸ್ ಸೀಸನ್ 8 ರ ಟ್ರೋಫಿನಾ ಯಾರು ಮನೆಗೆ ಎಂತ್ಕೊಂಡು ಹೋಗ್ತಾರೆ ಅಂತಾ ವಿಚಾರನೂ ಭಾರೀ ಚರ್ಚೆಯಾಗ್ತಿದೆ. ಒಂದರಲ್ಲಿ ಸದ್ಯಕ್ಕೆ ಭಾರೀ ಸದ್ದು ಮಾಡ್ತಿರೋ ಹೆಸ್ರು ಅಂದ್ರೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ.


ಯೆಸ್… ಎಲ್ಲರ ಮನೆ ಮಗಳಂತಿದ್ದ ವೈಷ್ಣವಿ ಗೌಡ ದೊಡ್ಮನೆಗೆ ಎಂಟ್ರಿ ಕೊಟ್ಟ ಯಾರು ಕೂಡ ವೈಷ್ಣವಿ ಗೌಡ ಇಷ್ಟೊಂದು ದಿನ ಬಿಗ್ ಬಾಸ್ ಮನೇಲಿ ಇರ್ತಾರೆ ಜನರ ದಿಲ್ ಕದಿತಾರೆ ಅಂತಾ ಯಾರು ಅಂದುಕೊಂಡಿರಲಿಲ್ಲ. ಆದ್ರೆ ದಿನಗಳು ಹೋಗುತ್ತಿದ್ದಂತೆ ಬಿಗ್ ಬಾಸ್ ಹಿಸ್ಟರಿ ರಿಪೀಟ್ ಆಗುತ್ತಾ ಅನ್ನೋ ಮಾತುಗಳು ಬಿಗ್ ಬಾಸ್ ಮನೆಯ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸ್ತಾ ಇದೆ. ಅದೇನಪ್ಪಾ ಅಂದ್ರೆ ಈ ಹಿಂದೆ ಬಿಗ್ ಬಾಸ್ ಸೀಸನ್ ವಿನ್ನರ್ ಶೃತಿ ಆದಂತೆ ಮತ್ತೊಮ್ಮೆ ಹೆಣ್ಣು ಮಗಳೊಬ್ಬಳು ಬಿಗ್ ಬಾಸ್ ಕಿರೀಟ ಧರಿಸ್ತಾಳಾ ಅನ್ನೋದು. ಶೃತಿ ಅವರ ಬಳಿಕ ಬಂದ 5 ಸೀಸನ್ ಗಳಲ್ಲೂ ಯಾವೊಬ್ಬ ಮಹಿಳಾ ಕಟೆಸ್ಟೆಂಟ್ ಕೂಡ ಬಿಗ್ ಬಾಸ್ ವಿನ್ನರ್ ಕಿರೀಟ ಧರಿಸಿರಲಿಲ್ಲ. ಆದ್ರೆ ಈ ಬಾರಿ ಮತ್ತೆ ಅದೇ ಹಿಸ್ಟರಿ ರಿಪೀಟ್ ಆಗೋದು ಪಕ್ಕಾ ಅಂತಾ ಹೇಳಲಾಗುತ್ತಿದೆ.


ಇನ್ನು ಸದ್ಯ ವೈಷ್ಣವಿ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ಪಾತ್ರ ನಿಭಾಯಿಸಿ ಮನೆ ಮಗಳಂತಾಗಿದ್ದ ವೈಷ್ಣವಿ ಗೌಡ ಬಿಗ್ ಬಾಸ್ ಮನೇಲೂ ಪಕ್ಕಾ ಮನೆ ಮಗಳಂತೆ ಎಲ್ಲರಿಗೂ ಅನ್ನಿಸುತತಿದ್ದಾರೆ. ವೈಷ್ಣವಿ ಗೌಡ ವ್ಯಕ್ತಿತ್ವ ಎಲ್ಲರನ್ನೂ ಅವರತ್ತ ಸೆಳೆಯುವಂತೆ ಮಾಡುತ್ತಿದೆ. ಸುಖಾಸುಮ್ನೆ ಏನೇನೋ ಮಾತನಾಡದೇ, ಆಡಿದ್ರೆ ಅರ್ಥವಿರುವ ಮಾತುಗಳನ್ನು ಆಡಬೇಕು ಎಂಬಂತಿರುವ ವೈಷ್ಣವಿ ವರ್ತನೆ ಅವರತ್ತ ಎಲ್ಲರನ್ನೂ ಸೆಳೆಯುವಂತೆ ಮಾಡುತ್ತಿದೆ.


ವೈಷ್ಣವಿ ಗೌಡ ಆಟ ಆಡುತ್ತಿರುವ ರೀತಿ ಮನೆಯೊಳಗಿನ ಸದಸ್ಯರ ಜೊತೆ ಅವರು ಹೊಂದಾಣಿತೆ ಮಾಡಿಕೊಳ್ಳುವ ರೀತಿ ಎಲ್ಲವೂ ಎಲ್ಲರಿಗೂ ಇಷ್ಟವಾಗುತ್ತಿದೆ. ಅದರಲ್ಲೂ ವೈಷ್ಣವಿ ಗೌಡ ಅವರ ಪರಿಶುದ್ಧ ನಗು ಯಾಕೋ ಅವರ ಕೆಲವಿಗೆ ಪ್ಲಸ್ ಪಾಯಿಂಟ್ ಎಂಬಂತಿದೆ. ಅಲ್ಲದೇ ದಿನೇ ದಿನೇ ಅವರೊಬ್ಬ ಫೈನಲ್ ಕಂಟೆಸ್ಟೆಂಟ್ ಕೊನೆ ತನಕ ಇರ್ತಾರೆ ಟ್ರೋಫಿ ತಂಗೊಂಡೇ ಹೊಗ್ತಾರೆ ಅನ್ನೋ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಾಗಾಗಿ ಈ ಬಾರಿ ವೈಷ್ಣವಿನೇ ವಿನ್ನರ್ ಅಂತಿದ್ದಾರೆ ಅವರ ಅಭಿಮಾನಿಗಳು. ಸದ್ಯ ವೈಷ್ಣವಿ ಅವರ ಆಟ ನೋಡಿದ್ರೆ ಅಭಿಮಾನಿಗಳ ಲೆಕ್ಕಾಚಾರ ಸತ್ಯ ಆಗುತ್ತಾ ಅನ್ನೋ ಅನುಮಾನ ಒಂದು ಕಡೆ ಆದ್ರೆ ರಾಜೀವ್ ಕೊನೆ ತನಕ ಇರ್ತಾರೆ ಅಂತಾ ಅಂದ್ಕೊಡ್ವಿ ಆದ್ರೆ ಅವ್ರೆ ಹೊರಗೆ ಬಂದಿದ್ದಾರೆ ಹಾಗಾಗಿ ಏನ್ ಹೇಳೋಕು ಆಗಲ್ಲ ಗುರು ಅಂತಿದ್ದಾರೆ ಇನ್ನೂ ಕೆಲವರು.ಆದ್ರೆ ಎಲ್ಲ ಪ್ರಶ್ನೆಗಳಿಗೆ ಬಿಗ್ ಬಾಸ್ ಫಿನಾಲೆ ದಿನವೇ ಉತ್ತರ ಸಿಗ್ಬೇಕಿದೆ.

- Advertisement -
spot_img

Latest News

error: Content is protected !!