ಕೊರೋನಾಗೆ ಸತ್ತವರ ಸಂಖ್ಯೆ ವಿಶ್ವದಲ್ಲಿ 1 ಲಕ್ಷದ ಗಡಿ ದಾಟಿದೆ. ಈ ಮೂಲಕ ಚೀನಾ ಮಹಾಮಾರಿಯ ಮರಣಮೃದಂಗ ಮುಂದುವರೆದಿದೆ.
ವಿಶ್ವದಲ್ಲಿ ಇದುವರೆಗೆ ಕೊರೋನಾ ಸೋಂಕು ಕಾಣಿಸಿಕೊಂಡವರ ಸಂಖ್ಯೆ 16 ಲಕ್ಷದ 52 ಸಾವಿರದ 655. ಇವರಲ್ಲಿ 1 ಲಕ್ಷದ 371 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ ಕೇವಲ 3 ಲಕ್ಷದ 69 ಸಾವಿರ 938 ಮಂದಿಯಷ್ಟೇ ಗುಣಮುಖರಾಗಿದ್ದಾರೆ. 11 ಲಕ್ಷದ 32 ಲಕ್ಷದ ಮಂದಿಯಲ್ಲಿ ಕೊರೋನಾ ಸೋಂಕು ಮಧ್ಯಮ ಸ್ಥಿತಿಯಲ್ಲಿದ್ದು, 50 ಸಾವಿರದ 161 ಮಂದಿಯ ಸ್ಥಿತಿ ಗಂಭೀರವಾಗಿದೆ.
ಇನ್ನು ಯಾವ ದೇಶದಲ್ಲಿ ಅತೀ ಹೆಚ್ಚು ಕೊರೋನಾ ಸಾವು ಆಗಿದೆ ಎಂದು ನೋಡೋದಾದ್ರೆ:
- ಅಮೆರಿಕ: 478,366 ಕೊರೋನಾ ಪ್ರಕರಣದಲ್ಲಿ 17,927 ಮಂದಿ ಸಾವು
- ಸ್ಪೇನ್ : 157,053 ಕೊರೋನಾ ರೋಗಿಗಳಲ್ಲಿ 15,970 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
- ಇಟಲಿ : 147,577 ಕೊರೋನಾ ರೋಗಿಗಳಲ್ಲಿ 18,849 ಮಂದಿ ಮೃತಪಟ್ಟಿದ್ದಾರೆ.
- ಜರ್ಮನಿ : 119,624 ಕೊರೋನಾ ಪೀಡಿತರಲ್ಲಿ 2,607 ಜನರು ಪ್ರಾಣಬಿಟ್ಟಿದ್ದಾರೆ.
- ಫ್ರಾನ್ಸ್ : 117,749 ಕೊರೋನಾ ಸೋಂಕಿತರಲ್ಲಿ 12,210 ರೋಗಿಗಳು ಬಲಿ ಆಗಿದ್ದಾರೆ.
- ಚೀನಾ: 81,907 ಕೊರೋನಾ ರೋಗಿಗಳಲ್ಲಿ ಸತ್ತವರು 3,336 ಮಂದಿ
- ಬ್ರಿಟನ್: 70,272 ಕೊರೋನಾ ರೋಗಿಗಳಲ್ಲಿ ಮೃತಪಟ್ಟವರು 8,958 ಜನರು.
- ಇರಾನ್ : 68,192 ಕೊರೋನಾ ಸೋಂಕಿತರಲ್ಲಿ 4,232 ಮಂದಿ ಸಾವನ್ನಪ್ಪಿದ್ದಾರೆ
- ಟರ್ಕಿ: 47,029 ಕೊರೋನಾ ಕೇಸ್‌ನಲ್ಲಿ 1,006 ಪ್ರಾಣ ಕಳೆದುಕೊಂಡಿದ್ದಾರೆ.
- ಬೆಲ್ಜಿಯಂ: 26,667 ಕೊರೋನಾ ರೋಗಿಗಳಲ್ಲಿ 3,019 ಸಾವನ್ನಪ್ಪಿದ್ದಾರೆ.
- ಸ್ವಿಟ್ಜರ್ಲೆಂಡ್: 24,548 ಕೊರೋನಾ ಪೀಡಿತರಲ್ಲಿ ಸತ್ತವರು 1,001 ಮಂದಿ.
- ನೆದೆರ್ಲೆಂಡ್ : 23,097 ಕೇಸ್‌ನಲ್ಲಿ ಮೃತಪಟ್ಟವರು 2,511 ಜನರು.
- ಬ್ರೆಜಿಲ್: 18,397 ಕೊರೋನಾ ಕೇಸ್‌ನಲ್ಲಿ 974 ಮಂದಿ ಬಲಿ ಆಗಿದ್ದಾರೆ
- ಪಾಕಿಸ್ತಾನ : 4,695 ಕೊರೋನಾ ಕೇಸ್‌ನಲ್ಲಿ 66 ಮಂದಿ ಸಾವನ್ನಪ್ಪಿದ್ದಾರೆ.
ಆಘಾತಕಾರಿ ಬೆಳವಣಿಗೆ ಏನೆಂದರೆ ಮಾರ್ಚ್ 31ಕ್ಕೆ 42,331ರಷ್ಟಿದ್ದ ಕೊರೋನಾ ಸಾವಿನ ಸಂಖ್ಯೆ ಕೇವಲ 10 ದಿನದಲ್ಲಿ 58 ಸಾವಿರದಷ್ಟು ಏರಿಕೆ ಕಂಡಿದೆ. ಮಾರ್ಚ್ 31ಕ್ಕೆ 8 ಲಕ್ಷದ 59 ಸಾವಿರದಷ್ಟಿದ್ದ ಕೊರೋನಾ ಕೇಸ್ ಇವತ್ತಿಗೆ 16 ಲಕ್ಷಕ್ಕೆ ಏರಿಕೆ ಆಗಿದೆ. ಅಂದರೆ ಕೊರೋನಾ ಕೇಸ್ ಮತ್ತು ಕೊರೋನಾ ಸಾವು ದುಪ್ಪಟ್ಟು ಆಗ್ತಿದೆ.
ಹೊಸ ಕೊರೋನಾ ಕೇಸ್ ಮತ್ತು ಸಾವಿನ ಪ್ರಕರಣದಲ್ಲಿ ಅಮೆರಿಕವೇ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ ದಿನದ ಲೆಕ್ಕದಲ್ಲೇ ಸಾವಿರಕ್ಕೂ ಹೆಚ್ಚು ಕೊರೋನಾ ಸಾವಿನ ಪ್ರಕರಣ ವರದಿ ಆಗ್ತಿದೆ.