Tuesday, September 17, 2024
Homeಕರಾವಳಿಕೇರಳದಿಂದ ಪಾದಯಾತ್ರೆಯಲ್ಲೇ ಬಾಗಲಕೋಟೆ ತಲುಪಿದ ಗರ್ಭಿಣಿ ಸಹಿತ ಕಾರ್ಮಿಕ ಕುಟುಂಬ

ಕೇರಳದಿಂದ ಪಾದಯಾತ್ರೆಯಲ್ಲೇ ಬಾಗಲಕೋಟೆ ತಲುಪಿದ ಗರ್ಭಿಣಿ ಸಹಿತ ಕಾರ್ಮಿಕ ಕುಟುಂಬ

spot_img
- Advertisement -
- Advertisement -

ಮಂಗಳೂರು: ಕೇರಳ ರಾಜ್ಯದ ಕಣ್ಣೂರಿನಿಂದ ಗರ್ಭಿಣಿ ಸೇರಿದಂತೆ ಇಬ್ಬರು ಮಕ್ಕಳು, ನಾಲ್ವರು ಗಂಡಸರು ಹಾಗೂ ಆರು ಮಂದಿ ಹೆಂಗಸರು ನಡೆದುಕೊಂಡೇ ಸಾಗುತ್ತಿದ್ದವರು ಇದೀಗ ಬಿಜಾಪುರ ದಾರಿಮಧ್ಯೆ ಬಾಗಲಕೋಟೆ ತಲುಪಿರುವುದಾಗಿ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕನೋರ್ವನ ಮೊಬೈಲ್ ಟವರ್ ಲೊಕೇಷನ್ ಮೂಲಕ ಪೊಲೀಸರಿಗೆ ಈ ವಿಷಯ ತಿಳಿದು ಬಂದಿದೆ. ಕಣ್ಣೂರಿನಿಂದ ಎ.5 ರಂದು ನಡೆದುಕೊಂಡು ಬಿಜಾಪುರದತ್ತ ಹೊರಡಿದ್ದ 12 ಮಂದಿ ಕಾರ್ಮಿಕ ಕುಟುಂಬ ಎ.8 ರಂದು ಮಧ್ಯಾಹ್ನ ಒಳದಾರಿಯಾಗಿ ಕರ್ನಾಟಕಕ್ಕೆ ಬಂದು ದೇರಳಕಟ್ಟೆ ತಲುಪಿದ್ದರು. ಇವರನ್ನು ಗಮನಿಸಿದ ಸ್ಥಳೀಯರು ಮಕ್ಕಳು ಹಾಗೂ ಗರ್ಭಿಣಿಯನ್ನು ಕಂಡು ಮಧ್ಯಾಹ್ನ ಮತ್ತು ರಾತ್ರಿ ಊಟೋಪಚಾರವನ್ನು ನಡೆಸಿ ಕಳುಹಿಸಿಕೊಟ್ಟಿದ್ದರು.

ಈ ಪೈಕಿ ಮಹಿಳೆಯೊಬ್ಬರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ನಡೆದುಕೊಂಡು ಸಾಗುತ್ತಿದ್ದ ಕುಟುಂಬದ ಕುರಿತು ದೃಶ್ಯ ಮಾಧ್ಯಮದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ಪೊಲೀಸರು ಕಾರ್ಮಿಕ ಕುಟುಂಬವನ್ನು ಸಂಪರ್ಕಿಸಿದ್ದರು. ಆದರೆ ಹೆದರಿಕೊಂಡ ಕಾರ್ಮಿಕ ಮೊಬೈಲ್ ಸ್ವಿಚ್ ಆಫ್ ನಡೆಸಿದ್ದರು. ದಾರಿಯುದ್ದಕ್ಕೂ ಕುಟುಂಬಕ್ಕಾಗಿ ಪೊಲೀಸರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಕುಟುಂಬ ತೊಕ್ಕೊಟ್ಟುವಿನಲ್ಲಿ ಸಿಕ್ಕ ಲಾರಿ ಮೂಲಕ ಜಿಲ್ಲೆಯನ್ನು ದಾಟಿದ್ದು, ಕಳೆದ ಎರಡು ದಿನಗಳಿಂದ ಲಾರಿಯಲ್ಲೇ ಪ್ರಯಾಣಿಸುತ್ತಿದ್ದಾರೆ. ಮಾಧ್ಯಮ ವರದಿಗೆ ಸ್ಪಂಧಿಸಿದ ಜಿಲ್ಲಾಡಳಿತ ಕುಟುಂಬದ ಹುಡುಕಾಟಕ್ಕೆ ಮುಂದಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಗೆ ಜವಾಬ್ದಾರಿ ವಹಿಸಿತ್ತು. ಗುರುವಾರ ಇಡೀ ದಿನ ಪೊಲೀಸ್ ಇಲಾಖೆ ಕುಟುಂಬದ ಕಾರ್ಯಾಚರಣೆ ನಡೆಸಿದರೂ ಯಾವುದೇ ಪತ್ತೆ ಕಾರ್ಯ ಸಾಧ್ಯವಾಗಿರಲಿಲ್ಲ.
ಇಂದು ಕಾರ್ಮಿಕ ಮೊಬೈಲ್ ಆನ್ ಮಾಡಿದ್ದು, ಟವರ್ ಲೊಕೇಷನ್ ಬಾಗಲಕೋಟೆ ತೋರಿಸಿರುವುದಾಗಿ ದಾಖಲೆ ಲಭಿಸಿದೆ. ಅಲ್ಲಿಂದ ಬಿಜಾಪುರಕ್ಕೆ 100 ಕಿ.ಮೀ ಇದ್ದು, ಇಂದು ತಡರಾತ್ರಿ ಅಥವಾ ನಾಳೆ ಬೆಳಿಗ್ಗೆ ಕುಟುಂಬ ಬಿಜಾಪುರ ತಲುಪಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!