Saturday, July 18, 2026
Homeಕರಾವಳಿಸುಳ್ಯ: ಕುಕ್ಕರ್ ಸ್ಫೋಟ, ಗೃಹಿಣಿ ಅಪಾಯದಿಂದ ಪಾರು !

ಸುಳ್ಯ: ಕುಕ್ಕರ್ ಸ್ಫೋಟ, ಗೃಹಿಣಿ ಅಪಾಯದಿಂದ ಪಾರು !

- Advertisement -
- Advertisement -

ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ಕುಕ್ಕರ್ ಸ್ಪೋಟಗೊಂಡು ಗೃಹಣಿಯೊಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡಿದೆ. ಶ್ರೀಮತಿ ಸುಮಾ ವಿ. ಆಚಾರ್ಯರು ಅಪಾಯದಿಂದ ಪಾರಾದ ಗೃಹಣಿ.

ಬೆಳಗ್ಗಿನ ತಿಂಡಿಗೆ ಕುಕ್ಕರ್ ನಲ್ಲಿ ಪಲಾವ್ ಇಟ್ಟಿದ್ದರು. ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವಷ್ಟು ಹೊತ್ತಿಗೆ ಹೊರಗಿನಿಂದ ಯಾರೋ ಕರೆದ ಧ್ವನಿ ಕೇಳಿಸಿ ಹೊರಗೆ ಬಂದಿದ್ದಾರೆ. ಈ ಹೊತ್ತಿನಲ್ಲಿ ಕುಕ್ಕರ್ ಸ್ಪೋಟಗೊಂಡು ಮೇಲ್ಛಾವಣಿಗೆ ತಾಗಿ ಹಾನಿಯಾಗಿರುವುದಲ್ಲದೆ ಅದರ ಒಳಗಿದ್ದ ಆಹಾರ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಕುಕ್ಕರ್ ನ ವಿಷಲ್ ಬರುವ ಭಾಗ ಸುಮಾರು 10 ಮೀಟರ್ ದೂರಕ್ಕೆ ಚಿಮ್ಮಿದೆ. ಕುಕ್ಕರ್ ನಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಎಲ್ಲರೂ ಎಚ್ಚರ ವಹಿಸುವಂತೆ ಅವರು ಸಲಹೆ ನೀಡಿದ್ದಾರೆ.

- Advertisement -

Latest News

error: Content is protected !!