Saturday, May 18, 2024
Homeಕರಾವಳಿಉಡುಪಿಉಡುಪಿ: ಹತ್ತು ದಿನಗಳ ನಂತರ ಎಂ.ಜಿ.ಎಂ ಕಾಲೇಜಿಗೆ ಬಿಗಿ ಭದ್ರತೆಯ ನಡುವೆ ಕ್ಯಾಂಪಸ್‌ಗೆ ಮರಳಿದ ವಿದ್ಯಾರ್ಥಿಗಳು

ಉಡುಪಿ: ಹತ್ತು ದಿನಗಳ ನಂತರ ಎಂ.ಜಿ.ಎಂ ಕಾಲೇಜಿಗೆ ಬಿಗಿ ಭದ್ರತೆಯ ನಡುವೆ ಕ್ಯಾಂಪಸ್‌ಗೆ ಮರಳಿದ ವಿದ್ಯಾರ್ಥಿಗಳು

spot_img
- Advertisement -
- Advertisement -

ಉಡುಪಿ: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಮುಚ್ಚಲಾಗಿದ್ದ ಇಲ್ಲಿನ ಎಂಜಿಎಂ ಕಾಲೇಜು ಶುಕ್ರವಾರ ಫೆಬ್ರವರಿ 18 ರಂದು ವಿದ್ಯಾರ್ಥಿಗಳಿಗೆ ಪುನಃ ತೆರೆಯಿತು.

ಫೆಬ್ರವರಿ 7 ರಂದು, ಎಂಜಿಎಂ ಕಾಲೇಜು ಆವರಣದಲ್ಲಿ ಸಮವಸ್ತ್ರದ ಬಗ್ಗೆ ಘರ್ಷಣೆ ನಡೆದಿತ್ತು, ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿರುವುದನ್ನು ವಿರೋಧಿಸಿದರು. ಕಾಲೇಜಿನ ಪ್ರಾಂಶುಪಾಲರು ಎರಡೂ ಗುಂಪುಗಳ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದರು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಪ್ರವೇಶಿಸುವಾಗ ಹಿಜಾಬ್ ತೆಗೆಯುವಂತೆ ಸೂಚಿಸಿದ್ದರು. ಆದಾಗ್ಯೂ ಹುಡುಗಿಯರು ಒತ್ತಡಕ್ಕೆ ಒಳಗಾಗಲು ನಿರಾಕರಿಸಿದರು ಮತ್ತು ಹಿಜಾಬ್ ಧರಿಸುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದರು. ಪರಿಸ್ಥಿತಿ ಕೈಮೀರುವ ಭೀತಿ ಎದುರಾಗಿದ್ದರಿಂದ ರಾಜ್ಯ ಸರ್ಕಾರದ ಆದೇಶದಂತೆ ಕಾಲೇಜಿಗೆ ರಜೆ ಘೋಷಿಸಿ ಮುಚ್ಚಲಾಯಿತು.

ಶುಕ್ರವಾರ, ಬಿಗಿ ಪೊಲೀಸ್ ಭದ್ರತೆಯ ನಡುವೆ ಕ್ಯಾಂಪಸ್ ಮತ್ತೆ ತೆರೆಯಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿದ್ದಾರೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜು ಆವರಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಬೋರ್ಡ್ ಪ್ರದರ್ಶಿಸಿದೆ.

ಹತ್ತು ದಿನಗಳ ರಜೆಯ ನಂತರ ಕಾಲೇಜಿನ ಪದವಿ ವಿಭಾಗ ತೆರೆಯಲಾಗಿದೆ. ಪಿಯು ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶುಕ್ರವಾರ ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!