Thursday, June 4, 2026
Homeಕರಾವಳಿಪುತ್ತೂರು: ವಾಹನಕ್ಕೆ ಸೈಡ್ ಕೊಡುವ ಬರದಲ್ಲಿ ಚರಂಡಿಗೆ ವಾಲಿದ ಸುಳ್ಯದ ಐಸ್ ಕ್ರೀಮ್ ಟೆಂಪೊ

ಪುತ್ತೂರು: ವಾಹನಕ್ಕೆ ಸೈಡ್ ಕೊಡುವ ಬರದಲ್ಲಿ ಚರಂಡಿಗೆ ವಾಲಿದ ಸುಳ್ಯದ ಐಸ್ ಕ್ರೀಮ್ ಟೆಂಪೊ

- Advertisement -
- Advertisement -

ಪುತ್ತೂರು: ಸುಳ್ಯದ ಐಸ್ ಕ್ರೀಮ್ ಟೆಂಪೊವೊಂದು ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವ ಬರದಲ್ಲಿ ಚರಂಡಿಗೆ ವಾಲಿ ನಿಂತ ಘಟನೆ ಪುತ್ತೂರು ಕೆ ಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ನೆಲ್ಲಿಕಟ್ಟೆ ರಸ್ತೆಯಲ್ಲಿ ಇಂದು ನಡೆದಿದೆ.

ಶಾಲಾ ಮಕ್ಕಳು ಇಲ್ಲದ ಸಮಯ ಈ ಘಟನೆ ನಡೆದಿದ್ದರಿಂದ ಬಾರಿ ಅಪಾಯವೊಂದು ತಪ್ಪಿದೆ. ಐಸ್ ಕ್ರೀಮ್ ಟೆಂಪೊ ಪುತ್ತೂರು ಸಿಟಿ ಆಸ್ಪತ್ರೆಯ ಹತ್ತಿರದಿಂದ ಇಳಿಜಾರು ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ರಸ್ತೆ ಬದಿ ಪೊದೆ ತುಂಬಿದ್ದರಿಂದ ಚಾಲಕನಿಗೆ ರಸ್ತೆ ಬದಿಯ ಚರಂಡಿ ಗೋಚರಿಸದೆ ಟೆಂಪೊದ ಎದುರಿನ ಟಯರ್ ಚರಂಡಿಗೆ ಬಿದ್ದ ಪರಿಣಾಮ ಟೆಂಪೊ ವಾಲಿ ಪಕ್ಕದ ಪೊದೆಗೆ ವಾಲಿದೆ.

ಇದರ ಪರಿಣಾಮ ಟೆಂಪೊಗೆ ಹಾನಿಯಾಗಿದೆ. ಇದೆ ರಸ್ತೆಯಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿದ್ದು ಟೆಂಪೊ ಅಪಘಾತದ ವೇಳೆ ಮಕ್ಕಳಿಲ್ಲದ ಕಾರಣ ಅಪಾಯವೊಂದು ತಪ್ಪಿದೆ. ಜೊತೆಗೆ ಇಲ್ಲಿ ಪೂಟ್ ಪಾತ್ ಇಲ್ಲದಿರುವುದು ಮುಂದೆಯೂ ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದೆ.

- Advertisement -

Latest News

error: Content is protected !!