ಕೊರೊನಾ ವಿರುದ್ಧ ಹೋರಾಡಲು ಕೊಂಕಣ್ ರೈಲ್ವೆ ವಿಭಾಗದಿಂದ ಒಟ್ಟು 1.85 ಕೋಟಿ ರೂ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದೆ. ಕೊಂಕಣ್ ರೈಲ್ವೆಯ ಸಿಎಸ್ಆರ್ ನಿಧಿಯಿಂದ ₹1,06,00,000/ ರೂ ಮತ್ತು ಕೊಂಕಣ್ ವಿಭಾಗದ ಎಲ್ಲ ಉದ್ಯೋಗಿಗಳ ಒಂದು ದಿನದ ಮೂಲವೇತನದಿಂದ ₹79,50,000/ ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಕೊಂಕಣ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ ವರ್ಮ, ಕರಾವಳಿ ಭಾಗದ ಜನತೆಯ ಜೀವನಾಡಿಯಾಗಿರುವ ನಮ್ಮ ವಿಭಾಗ ಕೊರೊನ ವಿರುದ್ಧ ಹೋರಾಡಲು ದೇಶದೊಂದಿಗೆ ಸದಾ ಜೊತೆಗಿರಲಿದೆ. ಮತ್ತು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ರೀತಿಯ ಸಹಾಯದ ಅವಶ್ಯಕತೆ ಇದ್ದಲಿ, ಕೊಂಕಣ್ ರೈಲ್ವೆ ಮುಂದೆ ನಿಂತು ಮಾಡಲಿದೆ ಎಂದು ಭರವಸೆ ನೀಡಿದರು.
ರೈಲ್ವೆ ಇಲಾಖೆಯು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ರೈಲುಗಳ ನಾನ್ ಏಸಿ ಬೋಗಿಗಳನ್ನು ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಸಲು ಸಿದ್ಧತೆ ನಡೆಸುತ್ತಿದ್ದು, ಮೊದಲ ಮಾದರಿಗಳನ್ನು ವ್ಯವಸ್ಥೆಗೊಳಿಸಿದೆ. ಆರಂಭಿಕ ಹಂತದಲ್ಲಿ ರೈಲ್ವೆಯ ಪ್ರತಿ ವಲಯಗಳಲ್ಲಿ ತಲಾ 10 ಬೋಗಿಗಳನ್ನು ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಸಲಾಗುವುದು.