ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ನವ ದಂಪತಿ ಮನೆಯಲ್ಲಿದ್ದಾರೆ. ಹಾಗಾಗಿ ಮುಂದಿನ ವರ್ಷಾರಂಭದಲ್ಲಿ ವಿಶ್ವದಾದ್ಯಂತ ಜನನ ಪ್ರಮಾಣ ಹೆಚ್ಚಾಗಲಿದೆ. ಇದನ್ನು ಹಾರ್ಲೆ ಥೆರಪಿಯ ಕ್ಲಿನಿಕಲ್ ಡೈರೆಕ್ಟರ್ ಡಾ. ಶೆರ್ರಿ ಜಾಕೋಬ್ಸನ್ ಬಹಿರಂಗಪಡಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಜನನವಾಗಲಿದೆ ಎಂದು ಬ್ರಿಟನ್ ನಲ್ಲಿ ನಡೆದ ಅಧ್ಯಯನದ ನಂತ್ರ ಹೇಳ್ತಿದ್ದೇನೆಂದು ಅವರು ಹೇಳಿದ್ದಾರೆ. ಜನರು ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅವರಿಗೆ ಬೇಸರವಾಗುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ದಂಪತಿ ತಮ್ಮ ಪೀಳಿಗೆ ಮುಂದುವರೆಸುವ ನಿರ್ಧಾರಕೈಗೊಳ್ಳುತ್ತಾರೆಂದು ಶೆರ್ರಿ ಹೇಳಿದ್ದಾರೆ.
ಗರ್ಭನಿರೋಧಕ ಮಾತ್ರೆ ತಯಾರಿಸುವ ಕಂಪನಿಗಳು ಕೆಲಸ ಮಾಡ್ತಿಲ್ಲ. ಔಷಧಿ ಅಂಗಡಿಯಲ್ಲಿ ಇದ್ರ ಸ್ಟಾಕ್ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಶೆರ್ರಿ ಹೇಳಿದ್ದಾರೆ. ಆನ್ಲೈನ್ ಶಾಪಿಂಗ್ ಸೈಟ್ ಗಳಿಂದ ಕೆಲವರು ಖರೀದಿ ಮಾಡ್ತಿದ್ದಾರೆ. ಅವರು ಏನು ಮಾಡ್ತಾರೆ? ಸಿನಿಮಾ ಹಾಲ್ ಇಲ್ಲ. ಮಾರುಕಟ್ಟೆಯಿಲ್ಲ. ಮಾಲ್ ಇಲ್ಲ. ಔಷಧಿ ಮಳಿಗೆಗಳಲ್ಲಿ ಕಾಂಡೋಮ್ ಕೂಡ ಸರಿಯಾಗಿ ಸಿಗ್ತಿಲ್ಲ.