ಕೊರೋನಾ ಮಹಾಮಾರಿಗೆ ಜಗತ್ತೇ ಬೆಚ್ಚಿ ಬಿದ್ದಿದೆ. ಏಷ್ಯಾ ಖಂಡದ ಹೆಚ್ಚಿನ ದೇಶಗಳು ಆರ್ಥಿಕವಾಗಿ ಮತ್ತು ಅರೋಗ್ಯ ದೃಷ್ಟಿಯಿಂದಲೂ ಕುಗ್ಗಿಹೋಗಿದೆ. ಭಾರತದಲ್ಲಂತೂ ಲಾಕ್ ಡೌನ್, ಜನತಾ ಕರ್ಫ್ಯೂ ಹೇರಿದರೂ ದೇಶದಲ್ಲಿ ಕೊರೋನಾ ನಿಯಂತ್ರಣ ಕಬ್ಬಿಣದ ಕಡಲೆಯಂತಾಗಿದೆ.
ಇನ್ನು ಸಾವಿನ ಸಂಖ್ಯೆಯ ಬಗ್ಗೆ ಮಾತನಾಡುವುದಾದರೆ ಚೀನಾದಲ್ಲಿ ಇಲ್ಲಿಯವರೆಗೂ ಕೋವಿಡ್-19 ನಿಂದಾಗಿ 3305 ಮೃತಪಟ್ಟಿದ್ದರೆ, ಸ್ಪೇನ್ ನಲ್ಲಿ 7716, ಇಟಲಿಯಲ್ಲಿ 11,591 ಮತ್ತು ಅಮೇರಿಕಾದಲ್ಲಿ 3165 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ವೈರಸ್ ನ ಜನ್ಮಸ್ಥಳ ವುಹಾನ್ ನಲ್ಲಿ ಸುಮಾರು 2500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಚೀನಾ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ಆದರೆ, ‘ಸಾವಿನ ಸಂಖ್ಯೆ’ ಬಗ್ಗೆ ವುಹಾನ್ ನಿವಾಸಿಗಳು ಹೇಳುವ ವಿಷಯಗಳೇ ಬೇರೆ.! ಸರ್ಕಾರ ನೀಡಿರುವ ಅಧಿಕೃತ ‘ಸಾವಿನ ಪ್ರಮಾಣ’ವನ್ನು ತಳ್ಳಿ ಹಾಕುವ ವುಹಾನ್ ನಿವಾಸಿಗಳು ಬೆಚ್ಚಿಬೀಳಿಸುವ ಭಯಾನಕ ಸತ್ಯವೊಂದನ್ನು ಬಾಯ್ಬಿಟಿದ್ದಾರೆ. ಅಲ್ಲಿನ ನಿವಾಸಿಗಳ ಪ್ರಕಾರ, ವುಹಾನ್ ನಗರವೊಂದರಲ್ಲೇ 42 ಸಾವಿರ ಮಂದಿ ಕೋವಿಡ್-19 ನಿಂದಾಗಿ ಜೀವ ಬಿಟ್ಟಿದ್ದಾರೆ.! ವುಹಾನ್ ನಗರದಲ್ಲಿ ಸುಮಾರು 2500 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಬಹುದು. ಆದ್ರೆ, ವುಹಾನ್ ನಿವಾಸಿಗಳ ಪ್ರಕಾರ ಅಲ್ಲಿ ಸಾವಿಗೀಡಾವರ ಸಂಖ್ಯೆ ವರದಿಯಾಗಿದ್ದಕ್ಕಿಂತ ಹೆಚ್ಚು.
ಒಂದು ತಿಂಗಳಿನಲ್ಲಿ ಏನಿಲ್ಲ ಅಂದರೂ 28 ಸಾವಿರ ಮಂದಿಯ ಅಂತ್ಯ ಸಂಸ್ಕಾರ ನಡೆದಿದೆ” ಎಂಬ ಕಠೋರ ಸತ್ಯವನ್ನು ವುಹಾನ್ ನಿವಾಸಿಯೊಬ್ಬರು ಬಾಯಿಬಿಟ್ಟಿದ್ದಾರೆ. ಕೋವಿಡ್-19 ಗಾಗಿ ಚಿಕಿತ್ಸೆ ಪಡೆಯದೆ ಎಷ್ಟೋ ಜನ ಮನೆಯಲ್ಲೇ ತೀರಿಕೊಂಡಿದ್ದಾರಂತೆ. ಅಂಥವರನ್ನು ಸರ್ಕಾರ ‘ಅಧಿಕೃತ ಲೆಕ್ಕಾಚಾರ’ದಲ್ಲಿ ಪರಿಗಣಿಸಲೇ ಇಲ್ಲ.
ವಿಶ್ವದಾದ್ಯಂತ ಇಲ್ಲಿಯವರೆಗೂ 785,777 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 37,815 ಮಂದಿ ಸಾವಿಗೀಡಾಗಿದ್ದಾರೆ. 165,607 ಮಂದಿ ಗುಣಮುಖರಾಗಿದ್ದಾರೆ. 29,488 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.