Saturday, June 6, 2026
HomeUncategorizedಸಿದ್ದರಾಮಯ್ಯ ಇದ್ದ ಕಾರು ಡ್ರೈವ್ ಮಾಡಲು ಹೋಗಿ ಗೇರ್ ತಿಳಿಯದೇ ಪರದಾಡಿದ ಶಾಸಕ!

ಸಿದ್ದರಾಮಯ್ಯ ಇದ್ದ ಕಾರು ಡ್ರೈವ್ ಮಾಡಲು ಹೋಗಿ ಗೇರ್ ತಿಳಿಯದೇ ಪರದಾಡಿದ ಶಾಸಕ!

- Advertisement -
- Advertisement -

ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು‌ ಚಲಾಯಿಸಲು ಹೋಗಿ ಕಾಂಗ್ರೆಸ್ ಶಾಸಕರೊಬ್ಬರು ಪೇಚಿಗೆ ಸಿಲುಕಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಬಳಿ ಈ ಘಟನೆ ನಡೆದಿದೆ.

ಇಂದು ಸಿದ್ದರಾಮಯ್ಯ ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಕಾರಿನ ಡ್ರೈವರ್ ಕೆಳಗಿಳಿಸಿ ಸ್ವತಃ ಕಾರು ಚಲಾಯಿಸಲು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮುಂದಾಗಿದ್ದರು.

ಆದರೆ ಕಾರ ಚಲಾಯಿಸುವ ವೇಳೆ ಕಾರಿನ ಗೇರ್ ತಿಳಿಯದೇ ಶಾಸಕ ಬಸವನ ಗೌಡ ದದ್ದಲ್ ಕಾರಿನಿಂದ ಕೆಳಗಿಳಿದಿದ್ದಾರೆ.

ನಂತರ ಚಾಲಕ ಕಾರು ಚಲಾಯಿಸಿ ಸಿದ್ದರಾಮಯ್ಯ ಅವರನ್ನು ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!