Saturday, June 13, 2026
Homeತಾಜಾ ಸುದ್ದಿಒಕ್ಕಲಿಗ ಸಮುದಾಯದ ವಿರುದ್ಧ ಹೇಳಿಕೆಗೆ ಆಕ್ಷೇಪ: ಶಾಸಕ ಜಮೀರ್ ಅಹಮದ್ ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ

ಒಕ್ಕಲಿಗ ಸಮುದಾಯದ ವಿರುದ್ಧ ಹೇಳಿಕೆಗೆ ಆಕ್ಷೇಪ: ಶಾಸಕ ಜಮೀರ್ ಅಹಮದ್ ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಒಕ್ಕಲಿಗ ಸಮುದಾಯ ಸಿಟ್ಟಿಗೆ ಕಾರಣವಾಗುವಂತೆ ಹೇಳಿಕೆ ನೀಡಿದ್ದ  ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮೂಲಕ ಸುದೀರ್ಘ ಎಚ್ಚರಿಕೆ ಪತ್ರದೊಂದಿಗೆ ಶಿಸ್ತು ಪಾಲಿಸುವಂತೆ ಸೂಚಿಸಲಾಗಿದೆ.

ನಿಮ್ಮ ಸಾರ್ವಜನಿಕ ಹೇಳಿಕೆಯು ಅನಗತ್ಯ, ಕೀಳು ಅಭಿರುಚಿಯಿಂದ ಕೂಡಿದ್ದು, ನಿಮ್ಮಂತಹ ಹಿರಿಯ ನಾಯಕರಿಂದ ಪಕ್ಷದ ಲಕ್ಷ್ಮಣ ರೇಖೆಯೊಳೆಗೆ ಇರುವುದನ್ನು ಪಕ್ಷ ನಿರೀಕ್ಷೆ ಮಾಡುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅನಾವಶ್ಯಕ ಹೇಳಿಕೆಯು ವಿವಾದ ಹಾಗೂ ಕಹಿಯಾದ ವಾತಾವರಣ ಸೃಷ್ಟಿಸಿದ್ದು, ಕಾಂಗ್ರೆಸ್ ಪಕ್ಷ ನಿಮ್ಮಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡುವುದಿಲ್ಲ ಎಂದು ಹೇಳಲಾಗಿದೆ‌.

ನಿಮ್ಮ ಅನಾವಶ್ಯಕ ಹೇಳಿಕೆಯು ತಪ್ಪು ಸಂದೇಶ ಹಾಗೂ ಅಭಿಪ್ರಾಯವನ್ನು ಸೃಷ್ಟಿಸಿದ್ದು,  ಈ ಮೂಲಕ ನಿಮಗೆ ನಾವು ಎಚ್ಚರಿಸುವುದೇನೆಂದರೆ ಸಾರ್ವಜನಿಕ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ಕಾಂಗ್ರೆಸ್ ಪಕ್ಷಕ್ಕೆ ತೃಪ್ತಿದಾಯಕವಾಗುವಂತೆ ಶಿಸ್ತು ಪಾಲನೆ ಮಾಡಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.

- Advertisement -

Latest News

error: Content is protected !!