ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹಾಗೂ ಬೇರೆಯವರಿಗೂ ಡೌನ್‌ಲೋಡ್ ಮಾಡಲು ಸಲಹೆ ನೀಡುವಂತೆ ಹೇಳಿದ್ದಾರೆ. ಆರೋಗ್ಯ ಸೇತು ಆಪ್ ಮಾಹಿತಿ ಇಲ್ಲಿದೆ.
ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಅಪ್ಲಿಕೇಶನ್ 11 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಲೊಕೇಷನ್ ಹಾಗೂ ಬ್ಲೂ ಟೂತ್ ಯಾವಾಗ್ಲೂ ಆನ್ ಮಾಡಿರಬೇಕು. ನೋಂದಣಿ ವೇಳೆ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ಹಾಕಿದ ನಂತ್ರ ನಿಮ್ಮ ಮಾಹಿತಿಯನ್ನು ಅಲ್ಲಿ ಭರ್ತಿ ಮಾಡಬೇಕು.
ಹೆಸರು, ವಿಳಾಸ, ವಯಸ್ಸು, ವೃತ್ತಿ, ಪ್ರಯಾಣದ ವಿವರಗಳು, ಇದರ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀವು ಇಲ್ಲಿ ಭರ್ತಿ ಮಾಡಬೇಕು. ಬಯಸಿದರೆ 20 ಸೆಕೆಂಡುಗಳ ಸ್ವಯಂ ಮೌಲ್ಯಮಾಪನ ಪರೀಕ್ಷೆಯನ್ನು ಮಾಡಬಹುದು. ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಕೋವಿಡ್ -19 ರ ಲಕ್ಷಣಗಳನ್ನು ಹೊಂದಿದ್ದೀರಾ ಎಂಬುದನ್ನು ಪತ್ತೆ ಹಚ್ಚಬಹುದು.
ನೀವು ಯಾವ ವಲಯದಲ್ಲಿದ್ದೀರಿ ಎಂಬುದನ್ನು ಈ ಅಪ್ಲಿಕೇಶನ್ ನಿಮಗೆ ತಿಳಿಸುತ್ತದೆ. ನೀವು ಹೆಚ್ಚಿನ ಅಪಾಯದ ಪ್ರದೇಶದಲ್ಲಿದ್ದರೂ ಸಹ ಈ ಅಪ್ಲಿಕೇಶನ್ ನಿಮಗೆ ಈ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಮೂಲಕ ಟೋಲ್ ಫ್ರೀ ಸಂಖ್ಯೆ 1075 ಗೆ ಕರೆ ಮಾಡುವ ಮೂಲಕ ನೀವು ವೈದ್ಯರನ್ನು ಭೇಟಿಯಾಗಬಹುದು.